Site icon PowerTV

Winter Skin care: ಚಳಿಗಾಲದಲ್ಲಿ ಚರ್ಮದ ಆರೈಕೆಯ ಬಗ್ಗೆ ಇರಲಿ ಕಾಳಜಿ

ಚಳಿಗಾಲ ಶುರುವಾದಂತೆ ನಾವು ಚರ್ಮದ ಬಗ್ಗೆ ಅಷ್ಟೋಂದು ಕಾಳಜಿವಹಿಸುವುದಿಲ್ಲ ಇದರಿಂದ ನಮ್ಮ ಚರ್ಮದಂತಹ ಕಾಯಿಲೆಗಳು ಬರುತ್ತಾವೆ ಇದರಿಂದ ಚರ್ಮದ ಕಾಂತಿ ಕ್ಷೀಣಿಸಿ ನಾವು ಚರ್ಮದ ಸ್ಪರ್ಶವೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತಾದೆ. ಆದರಿಂದ ನಾವು ನಮ್ಮ ಚರ್ಮದ ಮೇಲೆ ಅತೀವ ಕಾಳಜಿ ಮಾಡಬೇಗುತ್ತದೆ. 

1. ಮಾಯಿಶ್ಚರೈಸರ್‌: ವರ್ಷದ ಎಲ್ಲಾ ಋತುವಿನಲ್ಲೂ ನಿಮ್ಮ ಚರ್ಮದ ಮಾಯಿಶ್ಚರೈಸರ್‌ ಬಹಳ ಅಗತ್ಯ. ಚರ್ಮವನ್ನು ಒಣಗಲು ಬಿಡದೆ ಯಾವಾಗಲೂ ತೇವಾಂಶ ಇರುವಂತೆ ನೋಡಿಕೊಳ್ಳಿ.

2. ಸನ್‌ಸ್ಕ್ರೀನ್‌:ಇದು ಬೇಸಿಗೆಯಲ್ಲಿ ಮಾತ್ರವಲ್ಲ ಚಳಿಗಾಲದಲ್ಲೂ ನಿಮ್ಮ ಚರ್ಮದ ಆರೈಕೆಗೆ ಬಹಳ ಮುಖ್ಯ. ಚಳಿಗಾಲವಿದ್ದರೂ ಹೊರಗೆ ಸೂರ್ಯನ ಕಿರಣಗಳು ಇದ್ದೇ ಇರುತ್ತದೆ. ನಿಮ್ಮ ಚರ್ಮವನ್ನು ಯುವಿ ಕಿರಣಗಳಿಂದ ರಕ್ಷಿಸುತ್ತದೆ.

3. ಎಕ್ಸ್‌ಫೊಲಿಯೇಟ್‌

ಚರ್ಮವನ್ನು ಎಕ್ಸ್‌ಫೋಲಿಯೇಟ್‌ ಮಾಡುವುದು ಕೂಡಾ ಬಹಳ ಮುಖ್ಯ. ಹೀಗೆ ಮಾಡುವುದರಿಂದ ಚರ್ಮದ ಮೇಲಿನ ಕೊಳೆ, ಬ್ಲಾಕ್‌ ಹೆಡ್‌, ವೈಟ್‌ ಹೆಡ್‌, ಸತ್ತ ಚರ್ಮದ ಕೋಶಗಳು ತೊಲಗುತ್ತವೆ. ವಾರಕ್ಕೆ ಒಮ್ಮೆ ತಪ್ಪದೆ ಎಕ್ಸ್‌ಫೋಲಿಯೇಟ್‌ ಮಾಡಿ. ಆದರೆ ಚರ್ಮವನ್ನು ಬಹಳ ಒರಟಾಗಿ ಉಜ್ಜಬೇಡಿ.

4 ಹೈಡ್ರೇಷನ್‌

ಚಳಿಗಾಲದಲ್ಲಿ ಕೂಡಾ ನೀವು ಹೆಚ್ಚು ನೀರು ಸೇವಿಸುವುದು ಬಹಳ ಮುಖ್ಯ. ಇದರಿಂದ ನಿಮ್ಮ ಚರ್ಮ ಹೊರಭಾಗದಿಂದ ಮಾತ್ರವಲ್ಲದೆ, ಒಳಭಾಗದಿಂದ ಕೂಡಾ ಸುಂದರವಾಗಿರುತ್ತದೆ. ದೇಹದ ಕಲ್ಮಷ, ಬೆವರು ಮೂತ್ರದ ಮೂಲಕ ಹೊರ ಬರುತ್ತದೆ.

5. ಲಿಪ್‌ ಬಾಮ್‌

ಚಳಿಗಾಲದಲ್ಲಿ ತುಟಿ ಕೂಡಾ ಬೇಗ ಒಣಗುತ್ತದೆ. ಕೆಲವರಿಗಂತೂ ಬಹಳ ಒಡೆದಂತೆ ಆಗುತ್ತದೆ. ಆದ್ದರಿಂದ ತುಟಿಗೆ ಪ್ರತಿ ರಾತ್ರಿ ಲಿಪ್‌ ಬಾಮ್‌ ಹಚ್ಚುವುದನ್ನು ಮರೆಯಬೇಡಿ. ಸಣ್ಣ ಪುಟ್ಟ ಲಿಪ್‌ ಬಾಮ್‌ ಬಳಸುವ ಬದಲು ಒಳ್ಳೆ ಪ್ರಾಡಕ್ಟ್‌ ಬಳಸಿ.

ಹೀಗೆ ನಾವು ನಮ್ಮ ಚರ್ಮದ ಕಾಳಜಿ ಮಾಡಬೇಕು

 

 

 

 

 

 

 

Exit mobile version