Site icon PowerTV

ಮೋದಿನ ಬೈದ್ರೆ ಮಂತ್ರಿಗಿರಿ ಉಳಿಯುತ್ತೆ : ‘ಕೈ’ ಸಚಿವನಿಗೆ ಪ್ರಲ್ಹಾದ್ ಜೋಶಿ ತಿರುಗೇಟು

ಹುಬ್ಬಳ್ಳಿ : ನನ್ನ‌ ಬೈದ್ರೆ, ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ಬೈದ್ರೆ ಮಂತ್ರಿಗಿರಿ ಉಳಿಯತ್ತೆ ಅನ್ನೋದಕ್ಕೆ ಮಾತನಾಡುತ್ತಿದ್ದಾರೆ ಎಂದು ಸಚಿವ ಸಂತೋಷ್ ಲಾಡ್​ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಗಿರಿ ಉಳಿಬೇಕಲ್ವಾ? ಹಾಗಾಗಿ, ನನ್ನ ಬೈಯ್ಯುತ್ತಿದ್ದಾರೆ. ಮಂತ್ರಿಗಿರಿ ಉಳಿಯಲಿ ಅಂತ ಹೇಳಿಕೆ ನೀಡುತ್ತಿದ್ದಾರೆ, ಮಾತನಾಡಲಿ ಪಾಪ ಎಂದು ಕುಟುಕಿದ್ದಾರೆ.

ಹುಬ್ಬಳ್ಳಿಯ ಗಲಭೆ ಮಾಡಿದವರು ನಿಮಗೆ ಅಮಾಯಕರು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆ ಮಾಡಿದವರು ನಿಮಗೆ ಅಮಾಯಕರು. ಮಂಗಳೂರ ಬಾಂಬ್ ಬ್ಲಾಸ್ಟ್ ಮಾಡಿದವರು ನಿಮಗೆ ಸಹೋದರರು. ಹೀಗಾಗಿ, ನಿಮಗೆ ISIS ಮಾದರಿ ಆಡಳಿತ ಅನ್ನಲಾರದೆ ಏನು ಅನ್ನಬೇಕು‌ ಎಂದು ಕಿಡಿಕಾರಿದ್ದಾರೆ.

ನಾವು ಹೋರಾಟ ಮಾಡಿ ಇಲ್ಲಿಗೆ ಬಂದಿದ್ದೇವೆ

ಯಾರೂ ರಾಮ ಭಕ್ತರಿದಾರೆ, ಬಿಜೆಪಿ ಪರ‌ ಕೆಲಸ ಮಾಡೋರನ್ನ ಹೊರಗೆ ಹಾಕಬೇಕು ಅಂತಾರೆ. ಆದ್ರೆ, ನಾವು ಅಷ್ಟು ಸರಳವಾಗಿ ಹೊರಗೆ ಹೋಗಲ್ಲ. ನಾವು ಹೋರಾಟ ಮಾಡಿ ಇಲ್ಲಿಗೆ ಬಂದಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಟಿ ಬಿಸಿದ್ದಾರೆ.

Exit mobile version