Site icon PowerTV

ಅಪ್ಪನ ಕ್ಷೇತ್ರ ಬಿಡಿಸಿ ಬಾದಾಮಿಗೆ ಓಡಿಸುವವರು ನ್ಯಾಷನಲ್ ಲೀಡರ್: ಪ್ರತಾಪ್‌ ಸಿಂಹ ಟಾಂಗ್‌

ಮೈಸೂರು: ಪ್ರತಾಪ್ ಸಿಂಹ ನ್ಯಾಷನಲ್ ಲೀಡರಾ? ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಇದೀಗ  ಸಂಸದ ಪ್ರತಾಪ್‌ ಸಿಂಹ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಾತಮನಾಡಿದ ಅವರು ನಾನು ಖಂಡಿತಾ ನ್ಯಾಷನಲ್​ ಲೀಡರ್​ ಅಲ್ಲ.ಬಡವರ ಕುಟುಂಬದಿಂದ ಬಂದು ಬರಹದ ಮೂಲಕ ನಾನು ಹೆಸರು ಸಂಪಾದಿಸಿ ಈ ಸ್ಥಾನಕ್ಕೆ ಬಂದಿದ್ದೇನೆ.

ಇದನ್ನೂ ಓದಿ: ಕನ್ನಡದಲ್ಲೊಂದು ಹನುಮಾನ್ ಚಾಲಿಸಾ

ಅಪ್ಪ ಸಿಎಂ ಆಗಿದ್ದರೆ ತನ್ನ ಖಾಸಗಿ ಲ್ಯಾಬ್‌ಗೆ ಗುತ್ತಿಗೆ ಪಡೆಯುವವರು ನ್ಯಾಷನಲ್ ಲೀಡರ್ ಎಂದು ಟೀಕಿಸಿದ ಅವರು, ಅಪ್ಪನ ನೆಲೆ ಬಿಡಿಸಿ ಬಾದಾಮಿ ಕ್ಷೇತ್ರಕ್ಕೆ ಓಡಿಸುವವರು ನ್ಯಾಷನಲ್ ಲೀಡರ್, ತಾನು ಹೇಳಿದ ವರ್ಗಾವಣೆ ಲಿಸ್ಟ್‌ಗೆ ಸಹಿ ಮಾಡಿ ಅಂತ ಸಿಎಂ ಮೇಲೆ ಒತ್ತಡ ತರುವವರು ನ್ಯಾಷನಲ್ ಲೀಡರ್  ಮೈಸೂರು ಭಾಗದ ನಿಜವಾದ ನ್ಯಾಷನಲ್ ಲೀಡರ್ ಯತೀಂದ್ರ ಸಿದ್ದರಾಮಯ್ಯ ಎಂದು ಟಾಂಗ್‌ ಕೊಟ್ಟಿದ್ದಾರೆ.

Exit mobile version