Site icon PowerTV

ಮೆಟ್ರೋದಲ್ಲಿ ಅವಘಡ ತಪ್ಪಿಸಲು BMRCL ಮಾಸ್ಟರ್ ಪ್ಲಾನ್​!

ಬೆಂಗಳೂರು: ಕಳೆದ ಒಂದು ವಾರದಿಂದ ನಮ್ಮ ಮೆಟ್ರೋದಲ್ಲಿ ನಾನಾ ಅನಾಹುತಗಳು ಸಂಭವಿಸಿವೆ. ಹೀಗಾಗಿ ಇದಕ್ಕೆಲ್ಲ ಕಡಿವಾಣ ಹಾಕಲು BMRCL ಮಾಸ್ಟರ್ ಪ್ಲಾನ್ ಮಾಡಿದೆ.

ಇದನ್ನೂ ಓದಿ: ಉ.ಕರ್ನಾಟಕ ಜನತೆಗೆ ಸಿಹಿಸುದ್ದಿ ನೀಡಿದ ಸಚಿವ ರಾಮಲಿಂಗಾರೆಡ್ಡಿ!

ಫ್ಲಾಟ್ ಫಾರಂ ನಿಂದ ಟ್ರ್ಯಾಕ್ ನಡುವೆ ತಡೆಗೋಡೆ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಫ್ಲಾಟ್ ಫಾರ್ಮ್ ಸ್ಕ್ರೀನ್ ಡೋರ್ ಅನ್ನು ಎಲ್ಲಾ ಮೆಟ್ರೋ ನಿಲ್ದಾಣದಲ್ಲಿ‌ ನಿರ್ಮಾಣಕ್ಕೆ ಪ್ಲಾನ್ ಮಾಡ್ತಿದೆ. ಇನ್ನು ಬೆಂಗಳೂರು ಸಬ್‌ ಅರ್ಬನ್ ರೈಲು ಯೋಜನೆಯ ಕಾಮಗಾರಿಗೆ ತುಸು ವೇಗ ಸಿಕ್ಕಿದ್ದು, ಕಾರಿಡಾರ್‌- 2 ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ 31 ಮೀ ಉದ್ದದ ಯು ಗರ್ಡರ್‌ ಅಳವಡಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇಲ್ಲಿಯವರೆಗೂ ಮೆಟ್ರೊದಲ್ಲಿ 28 ಮೀ. ಉದ್ದದ ಗರ್ಡರ್ ತಯಾರಿಸಿ ಅಳವಡಿಕೆ‌ ಮಾಡಲಾಗುತ್ತಿತ್ತು. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯಲ್ಲಿ ಈ ದಾಖಲೆಯನ್ನು ಮುರಿಯಲಾಗಿದೆ.

Exit mobile version