Site icon PowerTV

ಕನ್ನಡದಲ್ಲೊಂದು ಹನುಮಾನ್ ಚಾಲಿಸಾ

ಬೆಂಗಳೂರು: ಕನ್ನಡದಲ್ಲಿ ಇದೇ ಮೊದಲನೇ ಬಾರಿಗೆ ಹನುಮಾನ ಚಾಲಿಸಾಅನ್ನು ಬಿಡುಗಡೆ ಮಾಡಲಾಗುತ್ತಿದೆ. ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಭಕ್ತಿ ಭಾವದಿಂದ ಮೂಡಿಬಂದಿದೆ. 
ಕೋಟ್ಯಂತರ ಜನ ಭಾರತೀಯರು ಕಾತುರದಿಂದ ಕಾಯುತ್ತಿರುವ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠೆ ಸುಸಮಯ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿಗೆ ಭಕ್ತಿಯ ನಿಯಮ – ಏನೆಂದು ತೋರಿಸಿಕೊಟ್ಟ ರಾಮಭಕ್ತ ಹನುಮನ ಕುರಿತಾದ ಹನುಮಾನ್ ಚಾಲಿಸಾ ಬಿಡುಗಡೆಯಾಗಿದೆ.

ಹೃತ್ಕಂಠ ಗಾಯಕ ನಮ್ಮ ಕನ್ನಡದ ಹೆಮ್ಮೆಯ ವಿಜಯ್ ಪ್ರಕಾಶ್ ಸುಶ್ರಾವ್ಯವಾಗಿ ಭಕ್ತಿಪರವಶರಾಗಿ ಹಾಡಿದ್ದಾರೆ.  ಈಗಾಗಲೇ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಹಲವು ಚಿತ್ರಗಳಿಗೆ ಸಂಗೀತ ನೀಡಿ ಜನ ಮನ್ನಣೆಗಳಿಸಿರುವ ಲೋಕಿ ತವಸ್ಯ ಅವರು. ಹನುಮನ ಕುರಿತಾಗಿ ಹಲವು ಕೃತಿಗಳು, ಗೀತೆಗಳು, ಭಕ್ತಿಗೀತೆಗಳು ಬಂದಿವೆ.

ಆದರೆ ಕನ್ನಡದಲ್ಲೇ ಪ್ರಪ್ರಥಮ ಬಾರಿಗೆ ಹನುಮಾನ್ ಚಾಲಿಸವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಒಂದು ಆಲ್ಬಂ ತಯಾರಿಸಲಾಗಿದೆ. ಇಂತಹ ಒಂದು ಅದ್ಭುತ ಕೆಲಸವನ್ನು ಹನುಮನ ಅಪ್ರತಿಮ ಭಕ್ತರಾದ ವೆಂಕಟೇಶ್  ಉತ್ತರಹಳ್ಳಿ ಬಹಳ ಆಸ್ಥೆವಹಿಸಿ ತನು ಮನ ಧನವನ್ನು ಸಮರ್ಪಿಸಿ ಲಕ್ಷ್ಮಿ ವೆಂಕಟೇಶ್ವರ RG510 ಉತ್ತರಹಳ್ಳಿ ಬ್ಯಾನರ್ ಅಡಿಯಲ್ಲಿ ಈ ಆಲ್ಬಂ ಅನ್ನು ನಿರ್ಮಿಸಿದ್ದಾರೆ.

 

 

Exit mobile version