Site icon PowerTV

ಹಳೆ ಪಿಂಚಣಿ ಸೌಲಭ್ಯಕ್ಕೆ ಆಗ್ರಹಿಸಿ ಕಾರ್ಮಿಕರಿಂದ ಉಪವಾಸ ಸತ್ಯಾಗ್ರಹ

ಬೀದರ್ : ಹೊಸ ಪಿಂಚಣಿ ಸೌಲಭ್ಯ ವಿರೋಧಿಸಿ ರೈಲ್ವೆ ಕಾರ್ಮಿಕರು ಒಂದು ದಿನ ಉಪವಾಸ ಸತ್ಯಾಗ್ರಹ ಕೈಗೊಂಡು, ಪ್ರತಿಭಟನೆ ನಡೆಸಿದರು.

ಬೀದರ್‌ನ ಕೇಂದ್ರ ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ಕುಳಿತ ಕಾರ್ಮಿಕರು ಸೌತ್ ಸೆಂಟ್ರಲ್ ರೈಲ್ವೆ ಮಜ್ದೂರ್ ಸಂಘದಿಂದ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಿದರು.‌

ಉಪವಾಸ ಸತ್ಯಾಗ್ರಹದಲ್ಲಿ ಜಿಲ್ಲೆಯ ವಿವಿಧ ರೈಲ್ವೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಹತ್ತಾರು ಜನ ಕಾರ್ಮಿಕರು ಭಾಗಿಯಾಗಿದ್ದರು. ಹೊಸ ಪಿಂಚನಿ ಸೌಲಭ್ಯದಿಂದ ನಿವೃತ್ತಿ ನಂತರ ಜೀವನ ನಡೆಸುವುದು ಕಷ್ಟಕರವಾಗುತ್ತದೆ. ಹೀಗಾಗಿ, ನಮಗೆಲ್ಲಾ ಹೊಸ ಪಿಂಚಣಿ ಸೌಲಭ್ಯದ ಬದಲಾಗಿ, ಹಳೆ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮಜ್ದೂರ ಸಂಘದ ಪ್ರಮುಖರು ಆಗ್ರಹಿಸಿದರು.

ಉಪವಾಸ ಸತ್ಯಾಗ್ರಹದಲ್ಲಿ ಮಜ್ದೂರ್ ಸಂಘದ ಅಧ್ಯಕ್ಷ ಶ್ರೀಪತಿ, ಸೆಕ್ರೆಟರಿ ರಮೇಶ್ ಕುಮಾರ್, ವೈಸ್ ಚೇರ್ಮನ್ ರಾಜಕುಮಾರ್ ಬಂಡೆಪ್ಪ, ಅಸಿಸ್ಟಂಟ್ ಸೆಕ್ರೆಟರಿ ವೀರಶೆಟ್ಟಿ ಕಾಂಬ್ಳೆ ಹಲವರು ಸಾಥ್ ನೀಡಿದರು.

Exit mobile version