Site icon PowerTV

ಕೊರೋನಾ ವೇಳೆ ದುಡ್ಡು ತಿಂದವರು ನಾಶವಾಗಲಿ : ಶಾಸಕ ಯತ್ನಾಳ್

ವಿಜಯಪುರ : ಕೊರೋನಾ ಮಹಾಮಾರಿಯೊಳಗೆ ದುಡ್ಡು ತಿಂದವರು ನಾಶವಾಗಿ ಹೋಗಲಿ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನೀವು ಕೊವಿಡ್ ಹಗರಣದ ಮಾಹಿತಿ ತಗೊಂಡ್ರೆ ಹುಚ್ಚು ಹಿಡಿಯುತ್ತೆ ಎಂದು ಔಷಧಿ, ಕಿಟ್ ಖರೀದಿ ಹಗರಣದ ಬಗ್ಗೆ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

990 ರೂಪಾಯಿ ಇದ್ದ ರೆಮ್ಡೆಸಿವಿರ್ ಇಂಜೆಕ್ಷನ್ 1,350 ರೂಪಾಯಿಗೆ ಖರೀದಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ 1 ಲಕ್ಷ 30 ಸಾವಿರಕ್ಕೆ ಒಂದು ಕಿಟ್ ಖರೀದಿಸಿದ್ದಾರೆ. ಆದ್ರೆ, ಅದೇ ಕಿಟ್ ಕರ್ನಾಟಕದಲ್ಲಿ 2 ಲಕ್ಷ 90 ಸಾವಿರಕ್ಕೆ ಖರೀದಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕೊರೋನಾ ವೇಳೆ ಬಹಳ ಹಗರಣ ಆಗಿವೆ

ಹಿಮಾಚಲ ಸರ್ಕಾರದವರು ಐದು ವರ್ಷ ಗ್ಯಾರಂಟಿಗೆ ಔಷಧಿ ಖರೀದಿಸಿದ್ದಾರೆ. ಕರ್ನಾಟಕ ಸರ್ಕಾರದವರು ಮೂರು ವರ್ಷಕ್ಕೆ ಗ್ಯಾರಂಟಿ. ಆದ್ರೆ, 2.90 ಲಕ್ಷ ಖರೀದಿ, ಅದೇ ಒಂದೇ ಕಂಪನಿಯದ್ದು ಹಿಮಾಚಲ ಪ್ರದೇಶ ಸರ್ಕಾರ ಖರೀದಿಸಿದ್ದು 1.30 ಲಕ್ಷಕ್ಕೆ, ಇವೆಲ್ಲವೂ ಬಹಳ ಹಗರಣ ಆಗಿವೆ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.

Exit mobile version