Site icon PowerTV

ಪತ್ನಿಗೆ ಊಟದಲ್ಲಿ ನಿದ್ದೆಮಾತ್ರೆ ಬೆರೆಸಿ, ಕಿಲಾಡಿ ಗಂಡ ಕೆಲಸದವಳೊಂದಿಗೆ ರಾಸಲೀಲೆ!

ಬೆಂಗಳೂರು: ನಿತ್ಯ ಪತ್ನಿಗೆ ನಿದ್ರೆ ಮಾತ್ರೆ ಹಾಕಿ ಮಲಗಿಸಿ ಬಳಿಕ ಕೆಲಸದವಳ ಜೊತೆ ಸರಸದಲ್ಲಿ ತೊಡಗುತ್ತಿದ್ದ ಪತಿಯ ವಿರುದ್ದ ಪತ್ನಿ ಕೊಲೆಯತ್ನ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.

ಪತಿ ಸುನೀಲ್​, ವಿರುದ್ದ ಚಂದ್ರಲೇಔಟ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿ ಪತಿ ವಿಪರೀತ ಬೆಟ್ಟಿಂಗ್ ಚಟಕ್ಕೆ ಬಿದ್ದು ನಿತ್ಯ ಕುಡಿದು ಬಂದು ಮನಸೋ ಇಚ್ಚೆ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ ಅಷ್ಟೆ ಅಲ್ಲದೆ ಕೆಲಸದವಳೊಂದಿಗೆ ಸೇರಿ ಊಟದಲ್ಲಿ ನಿದ್ದೆ ಮಾತ್ರೆಯನ್ನು ಬೆರೆಸಿ ತಿನ್ನಿಸಿ ಮಲಗಿಸುತ್ತಿದ್ದ. ಬಳಿಕ ಕೆಲಸದವಳೊಂದಿಗೆ ರಾಸಲೀಲೆಯಲ್ಲಿ ತೊಡಗುತ್ತಿದ್ದ ಈ ದೃಶ್ಯಗಳನ್ನು ತಾನೇ ಕಣ್ಣಾರೆ ಕಂಡಿರುವುದಾಗಿ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ಸಿಎಂ ಗೆ ಆಹ್ವಾನ ಇಲ್ಲ, ಡಿಸಿಎಂ ಗೆ ಎಲ್ಲಿಂದ ಕೊಡೋದು: ಆರ್​.ಅಶೋಕ್​

ಜ.3 ರಂದು ಪತಿ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ತಿನ್ನಿಸಿದ್ದಾರೆ. ಪ್ರಜ್ಞೆ ಬಂದು ಎದ್ದು ನೋಡಿದಾಗ ಪತಿ ಹಾಗೂ ಮನೆಕೆಲಸದವಳು ಒಂದೇ ಹಾಸಿಗೆಯಲ್ಲಿ ಅಶ್ಲೀಲವಾಗಿದ್ದನ್ನ ಕಂಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಪತಿ ಕೆಲಸದವಳೊಂದಿಗೆ ಸೇರಿ ಅಮಾನಷವಾಗಿ ಹಲ್ಲೆ ಮಾಡಿದ್ದಾರೆ. ಭಯದಿಂದ ಇಲ್ಲಿನ ಚಂದ್ರಾ ಲೇಔಟ್​ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಪತಿಯ ವಿರುದ್ದ ವರದಕ್ಷಿಣೆ ಕಿರುಕುಳ, ಕೊಲೆಯತ್ನ ಹಾಗು ಮನೆ ಕೆಲಸದಾಕೆ ವಿರುದ್ದ ಜೀವಬೆದರಿಕೆ ಅರಿ ಪತ್ನಿ FIR ದಾಖಲಿಸಲಾಗಿದೆ.

Exit mobile version