Site icon PowerTV

ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಕ್ರಿಕೇಟಿಗ ಶಕೀಬ್​ಗೆ ಭರ್ಜರಿ ಗೆಲುವು!

ಢಾಕಾ : ಭಾನುವಾರ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಗೆಲುವು ಸಾಧಿಸಿದ್ದಾರೆ. ಮಾಗುರಾ -1 ಕ್ಷೇತ್ರದಿಂದ ಅವಾಮಿ ಲೀಗ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಕೀಬ್ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಶಕೀಬ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಜಿ ರೆಜೌಲ್ ಹುಸೇನ್ ವಿರುದ್ಧ 1,50,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹುಸೇನ್ 45,993 ಮತಗಳನ್ನು ಪಡೆದರು. ಚುನಾವಣಾ ಪ್ರಚಾರಕ್ಕಾಗಿ ಅವರು ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡಿದ್ದರು.

ಇದನ್ನೂ ಓದಿ: ನಟ ಯಶ್ ಜನ್ಮದಿನಕ್ಕೆ ಕಟೌಟ್​​​ ಕಟ್ಟುವಾಗ ದುರಂತ: ಮೂವರು ಸ್ಥಳದಲ್ಲೇ ಸಾವು!

 

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭರ್ಜರಿ ಗೆಲುವಿನ ಮೂಲಕ ಐದನೇ ಅವಧಿಗೆ ಆಯ್ಕೆಯಾಗಿದ್ದಾರೆ. ಭಾನುವಾರದ ಮತದಾನ ಮುಗಿದ ತಕ್ಷಣ ನಡೆದ ಮತ ಎಣಿಕೆ ಕಾರ್ಯದಲ್ಲಿ ಅವರ ಪಕ್ಷವು ಸಂಸತ್ತಿನ 300 ಸ್ಥಾನಗಳಲ್ಲಿ 200 ಸ್ಥಾನಗಳನ್ನು ಗೆದ್ದಿದೆ. ಅವಾಮಿ ಲೀಗ್ ಅನ್ನು ವಿಜೇತರೆಂದು ಕರೆಯಬಹುದು ಎಂದು ಚುನಾವಣಾ ಆಯೋಗದ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಈಗಾಗಲೇ ಲಭ್ಯವಿರುವ ಫಲಿತಾಂಶಗಳೊಂದಿಗೆ ನಾವು ಅವಾಮಿ ಲೀಗ್ ವಿಜೇತರನ್ನು ಕರೆಯಬಹುದು ಆದರೆ ಉಳಿದ ಕ್ಷೇತ್ರಗಳಲ್ಲಿ ಮತ ಎಣಿಕೆ ಮುಗಿದ ನಂತರ ಅಂತಿಮ ಘೋಷಣೆ ಮಾಡಲಾಗುವುದು” ಎಂದು ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದರು.
Exit mobile version