Site icon PowerTV

BMTC ಎಂಡಿ ಜಿ. ಸತ್ಯವತಿ ವರ್ಗಾವಣೆ ; ನೂತನ MDಯಾಗಿ IAS ಅಧಿಕಾರಿ ರಾಮಚಂದ್ರನ್ ನೇಮಕ

ಬೆಂಗಳೂರು: ಬಿಎಂಟಿಸಿ ಎಂಡಿ ಸತ್ಯವತಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಸಿತ್ತು ಅದರಂತೆ ಇದು ಅವರನ್ನು ವಗಾರ್ವಣೆ ಮಾಡಿ ಅವರ ಸ್ಥಾನಕ್ಕೆ ಐಎಎಸ್‌ ಅಧಿಕಾರಿ ರಾಮಚಂದ್ರನ್ ನೇಮಕ ಮಾಡಲಾಗಿದೆ.

ಸತ್ಯವತಿ ವಿರುದ್ಧ ಸಾರಿಗೆ ಸಚಿವರಿಗೆ ಸಾಕಷ್ಟು ದೂರು ಬಂದಿತ್ತು. ಹೀಗಾಗಿ ಜಿ.ಸತ್ಯವತಿರನ್ನು ವರ್ಗಾವಣೆ ಮಾಡುವಂತೆ ಸಚಿವರಿಗೆ ಕೆಎಸ್‌ಆರ್‌ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಮನವಿ ಮಾಡಿತ್ತು. ಈ ಆಧಾರದ ಮೇಲೆ ರಾಜ್ಯ ಸರ್ಕಾರ ಸತ್ಯವತಿ ಅವರಿಗೆ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದೆ.

ಬಿಎಂಟಿಸಿಯ ನೂತನ ಎಂಡಿಯಾಗಿ ನೇಮಕವಾಗಿರುವ ರಾಮಚಂದ್ರನ್ ಆರ್ ಅವರು ಈ ಹಿಂದೆ ಬಿಬಿಎಂಪಿ ಸ್ಪೆಷಲ್ ಕಮೀಷನರ್ (ಚುನಾವಣಾ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

 

Exit mobile version