Site icon PowerTV

UI teaser : `UI ಫಸ್ಟ್‌ ಲುಕ್‌ ಟೀಸರ್‌’ ರಿಲೀಸ್ ; ಖಡಕ್‌ ಲುಕ್‌ನಲ್ಲಿ ಉಪ್ಪಿ!

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಅವರ ನಿರ್ದೇಶನದ UI ಚಿತ್ರದ  ಟೀಸರ್ ಬಿಡುಗಡೆ ಕಾರ್ಯಕ್ರಮ ಖಾಸಗಿ ಹೊಟೇಲ್‌ ಒಂದರಲ್ಲಿ ಅದ್ಧೂರಿಯಾಗಿ ಜ. 8ರಂದು ನೆರವೇರಿದೆ.

ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್, ನಟ ಸುದೀಪ್, ಶಿವರಾಜ್ ಕುಮಾರ್, ಡಾಲಿ ಧನಂಜಯ ಸೇರಿದಂತೆ ಚಿತ್ರರಂಗದ ಹಲವು ಸ್ಟಾರ್‌ಗಳು ಉಪ್ಪಿ ಕನಸಿಗೆ ಸಾಥ್‌ ಕೊಟ್ಟಿದ್ದಾರೆ.

ಇದೀಗ UI ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಅನಾವರಣಗೊಂಡಿದೆ. ಉಪೇಂದ್ರ ಅವರು ಖಡಕ್‌ ಲುಕ್‌ನಲ್ಲಿ ಕಂಡಿದ್ದಾರೆ. ಟೀಸರ್‌ನ ದೃಶ್ಯಗಳೂ ಹಾಲಿವುಡ್‌ ರೇಂಜ್‌ನಲ್ಲಿವೆ ಎಂದು ಉಪ್ಪಿ ಫ್ಯಾನ್ಸ್‌ ಕಮೆಂಟ್‌ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಕತ್ತಲೆಯ ಟೀಸರ್

ಉಪೇಂದ್ರ ಹುಟ್ಟುಹಬ್ಬದಂದು ಯುಐ ಸಿನಿಮಾ ಶೀರ್ಷಿಕೆಯೊಂದಿಗೆ ಕತ್ತಲೆಯ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಪೂರ್ತಿ ಕತ್ತಲ ಲೋಕ, ಸ್ಕ್ರೀನ್ ಮೇಲೆ ಏನೂ ಕಾಣಿಸದು. ಸದ್ದಷ್ಟೇ ಕೇಳುತ್ತೆ. ಅದರ ಜತೆಗೆ ಒಂದಷ್ಟು ಸಂಭಾಷಣೆ, ನೀರಿನ ಸದ್ದು, ಕುದುರೆ ಓಡುವ ಸದ್ದು, ಗದ್ದಲ. ಕೊನೆಗೆ ಯುಐ ಸಿನಿಮಾ ಶೀರ್ಷಿಕೆ ಪುನಃ ಕಾಣಿಸಿಕೊಳ್ಳುತ್ತದೆ. ಕುದುರೆ ಮುಖ, ಆ ಮುಖದೊಳಗೆ ಒಂದಷ್ಟು ಚಿತ್ರಗಳು, ಅದರ ಕಿವಿಗೆ ಹೆಡ್‌ಫೋನ್‌. ಕುದುರೆ ಮುಖದಲ್ಲೂ ಸಿನಿಮಾ ಶೀರ್ಷಿಕೆ ಇದೆ.

ಇದುವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳಲ್ಲೇ ಹೆಚ್ಚಿನ ಬಜೆಟ್‌ ಸಿನಿಮಾ UI. ಇದೀಗ ಈ ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂ. ಎಂದು ವರದಿಗಳಾಗಿವೆ. ವರ್ಷಗಳ ನಂತರ ನಿರ್ದೇಶನದತ್ತ ಮುಖ ಮಾಡಿರುವ ಉಪ್ಪಿ ಹೊಸ ಮುನ್ನುಡಿ ಬರೆಯಲು ಹೊರಟಿದ್ದಾರೆ.

ಜತೆಗೆ ಈ ಚಿತ್ರದಲ್ಲಿ ಯುವ ತಂತ್ರಜ್ಞರು‌ ಕೆಲಸ ಮಾಡುತ್ತಿದ್ದಾರೆ. ಉಪ್ಪಿ ಕ್ಯಾಪ್‌ ಹಾಕಿ, ಮೈಕ್‌ ಹಿಡಿದು ನಿರ್ದೇಶನಕ್ಕೆ ಇಳಿದಿದ್ದು, ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಇತಿಹಾಸ ಮರುಕಳಿಸಲಿದೆಯಾ ಎಂದು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.

ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮೆರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ ಏಷ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಬಳಸಲಾಗಿದೆ.

ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ಹೈ ಬಜೆಟ್ ಸಿನಿಮಾಗಳಲ್ಲಿ ‘UI’ ಕೂಡ ಒಂದು. ತನ್ನ ಕನಸನ್ನು ಸಿನಿಪ್ರಿಯರು ಒಟಿಟಿಯಲ್ಲಿ ಅಲ್ಲದೆ ಥಿಯೇಟರ್‌ನಲ್ಲೇ ಸಿನಿಮಾ ನೋಡಬೇಕು ಅಂತ ಉಪ್ಪಿ ಆಸೆ ಪಟ್ಟು ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

 

Exit mobile version