Site icon PowerTV

ರಾಮ ಮಂದಿರ ಉದ್ಘಾಟನೆಗೆ ಸೀರಿಯಲ್ ಸೀತಾರಾಮರಿಗೆ ಆಹ್ವಾನ ನೀಡಿದ ಟ್ರಸ್ಟ್​!

ಉತ್ತರಪ್ರದೇಶ: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ದೇಶದ ಗಣ್ಯರಿಗೆ ಶ್ರೀ ರಾಮತೀರ್ಥ ಟ್ರಸ್ಟ್ ಆಹ್ವಾನ ನೀಡುತ್ತಿದೆ. ಈ ಮಧ್ಯೆ ಟಿವಿ ಸೀತಾರಾಮರನ್ನು ಕೂಡ ಆಹ್ವಾನ ನೀಡಲಾಗಿದೆ.

ಜನಪ್ರಿಯ ರಾಮಾಯಣ ಸೀರಿಯಲ್ಲಿನಲ್ಲಿ 36 ವರ್ಷಗಳ ಹಿಂದೆ ನಟಿಸಿದ್ದ ದೀಪಿಕಾ ಚಿಖ್ಲಿಯಾ ಮತ್ತು ಅರುಣ್ ಗೋವಿಲ್ ರಮಾನಂದಸಾಗರ್ ನಟಿಸಿದ್ದರು. ಆ ಸಮಯದಲ್ಲಿ ದೂರದರ್ಶನದಲ್ಲಿ ಅತ್ಯಂತ ಜನಪ್ರಿಯವಾದ ರಾಮಾಯಣ ಧಾರಾವಾಹಿ ಪ್ರಸಾರವಾಗಿತ್ತು. ಇದೀಗ, ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಸಮರ್ಪಣಾ ಕಾರ್ಯಕ್ರಮದಲ್ಲಿ ಟಿ.ವಿ.ಸೀತಾರಾಮರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಇದನ್ನೂ ಓದಿ: ಸಲಾರ್​ ಸ್ಪ್ಯಾನಿಷ್​ ಭಾಷೆಯಲ್ಲಿ ರಿಲೀಸ್​ ಗೆ ಸಿದ್ದತೆ!

ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ದೀಪಿಕಾ ಚಿಕ್ಲಿಯಾ ಸೀತಾ ದೇವಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸಮಾರಂಭಕ್ಕೆ ಅವರನ್ನು ಆಹ್ವಾನಿಸಲಾಗಿದೆ ಎಂದು ದೀಪಿಕಾ ಖಚಿತಪಡಿಸಿದ್ದಾರೆ. ದೂರದರ್ಶನದಲ್ಲಿ 78 ಸಂಚಿಕೆಗಳನ್ನು ವ್ಯಾಪಿಸಿರುವ ಕ್ಲಾಸಿಕ್ ಟೆಲಿವಿಷನ್ ಶೋನಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ ಅರುಣ್ ಗೋವಿಲ್. ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸುವುದಾಗಿ ದೀಪಿಕಾ ಹೇಳಿದ್ದಾರೆ.

Exit mobile version