Site icon PowerTV

ಹೆತ್ತ ತಾಯಿಯನ್ನೇ ಬೀದಿಗೆ ಬಿಸಾಡಿ ಹೋದ ಪಾಪಿ ಮಗಳು-ಅಳಿಯ!

ಬೆಂಗಳೂರು: ಕೊರೆಯುವ ಚಳಿಯಲ್ಲಿ ತನ್ನ ಹೆತ್ತ ತಾಯಿಯನ್ನೇ ಬೀದಿಗೆ ಬಿಸಾಡಿ ಹೋಗಿರುವ ಅಮಾನವೀಯ ಘಟನೆ ಆನೇಕಲ್ ತಾಲ್ಲೂಕಿನ ಸರ್ಜಾಪುರ ಸಮೀಪದ ವಿ.ಕಲ್ಲಹಳ್ಳಿಯಲ್ಲಿ ನಡೆದಿದೆ. 

ಹೌದು,ಕಾರಲ್ಲಿ ಕಳ್ಳರಂತೆ ಬಂದ ಈ ಪಾಪಿಗಳು,ವಯಸ್ಸಾದ ತಾಯಿಯನ್ನು ರಾತ್ರೋರಾತ್ರಿ ರಸ್ತೆಯಲ್ಲಿ ಬಿಟ್ಟು ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

80 ವರ್ಷದ ಗ್ರೇಸಿ ಪೀಟರ್ ಎಂಬವರನ್ನು ಅವರ ಸ್ವಂತ ಮಗಳು ಹಾಗೂ ಅಳಿಯನೇ ಆಕೆಯನ್ನು ಬೀದಿಪಾಲು ಮಾಡಿದ್ದಾರೆ. ಗ್ರೇಸಿ ಪೀಟರ್‌ ದೊಮ್ಮಸಂದ್ರದಲ್ಲಿದ್ದ ಮಗಳು ಆಶಾರಾಣಿ, ಅಳಿಯ ಮಂಜುನಾಥ್ ಹಾಗೂ ಮೊಮ್ಮಕ್ಕಳ ಜತೆ ವಾಸವಿದ್ದರು.

ಇದನ್ನೂ ಓದಿ: ಏನೇ ಸಮಸ್ಯೆ ಬಂದ್ರು ಕುಗ್ಗಬೇಡ ಬೆನ್ನ ಹಿಂದೆ ನಾನಿದ್ದೇನೆ ಮುನ್ನುಗ್ಗು ಎಂದು ರಿಷಬ್ ಶೆಟ್ಟಿಗೆ ದೈವದ ಅಭಯ!

ಅಳಿಯ ಮಂಜುನಾಥ್‌ ದಿನನಿತ್ಯ ಕುಡಿದು ಬಂದು ಅತ್ತೆ ಗ್ರೇಸಿ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶದ್ಧಗಳಿಂದ ನಿಂದಿಸುತ್ತಿದ್ದ. ವೃದ್ಧೆಯ ಕಾಲು ಮುರಿದಿದ್ದರು, ಇದರಿಂದಾಗಿ ನರಳಾಡುತ್ತಿದ್ದರು. ನಿನ್ನೆ ಶುಕ್ರವಾರ ತಡರಾತ್ರಿ ಕಾರಿನಲ್ಲಿ ಬಂದ ಆಶಾರಾಣಿ ದಂಪತಿ ಹೆತ್ತ ತಾಯಿಯನ್ನು ಸರ್ಜಾಪುರದ ಕಲ್ಲಹಳ್ಳಿಯ ದೇವಾಲಯದ ಬಳಿ ಬಿಟ್ಟು ಪರಾರಿ ಆಗಿದ್ದರು.

ಬೆಳಗ್ಗೆ ದೇವಾಲಯಕ್ಕೆ ಬಂದಾಗ ಚಳಿಯಲ್ಲಿ ನಡುಗುತ್ತಿದ್ದ ವೃದ್ಧೆಯನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಬಳಿಕ ಆಟೋ ಮೂಲಕ ಬನ್ನೇರುಘಟ್ಟದ air humanitarian homesಗೆ ರವಾನೆ ಮಾಡಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಜತೆಗೆ ಮಕ್ಕಳ ಹೊಡೆದು ಗಾಯಗೊಂಡು ನರಳಾಡುತ್ತಿದ್ದ ಹಿರಿಜೀವಕ್ಕೆ ಆಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version