Site icon PowerTV

ಸೇರ್ಪಡೆಯಾದ ಒಂದೇ ವಾರದಲ್ಲಿ ಜಗನ್​ಮೋಹನ್​ ರೆಡ್ಡಿ ಪಕ್ಷ ತೊರೆದ ಕ್ರಿಕೇಟಿಗ ಅಂಬಟಿ ರಾಯುಡು!

ಆಂಧ್ರಪ್ರದೇಶ್​: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಅವರು. ಆಂಧ್ರ ಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ತೊರೆದು ರಾಜಕೀಯದಿಂದ ವಿರಾಮ ತೆಗೆದುಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ನಾನು ವೈಎಸ್‌ಆರ್‌ಸಿಪಿ ಪಕ್ಷವನ್ನು ತೊರೆಯಲು ಮತ್ತು ಸ್ವಲ್ಪ ಸಮಯದವರೆಗೆ ರಾಜಕೀಯದಿಂದ ದೂರವಿರಲು ನಿರ್ಧರಿಸಿದ್ದೇನೆ. ಮುಂದಿನ ನಡೆ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ದೊಡ್ಡಬಳ್ಳಾಪುರ ಎಪಿಎಂಸಿ ಅವರಣದಲ್ಲಿ ಸರಣಿ ಕಳ್ಳತನ!

ಡಿ.29ರಂದು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ ರೆಡ್ಡಿ ಸಮ್ಮುಖದಲ್ಲಿ ಅಂಬಟಿ ತಿರುಪತಿ ರಾಯುಡು ಅವರು ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಭಾರತ ತಂಡದ ಮಾಜಿ ಕ್ರಿಕೆಟರ್ ಅಂಬಟಿ ರಾಯುಡು ಅವರು ಈಚೆಗೆ ಕೆರಿಬಿಯನ್ ಪ್ರೀಮಿಯ‌ರ್ ಲೀಗ್‌ನಲ್ಲಿ ಸೇಂಟ್ ಕಿಟ್ ಮತ್ತು ನೇವಿಸ್ ಪ್ರರೆಟ್ ತಂಡವನ್ನು ಸೇರಿಕೊಂಡಿದರು.

Exit mobile version