Site icon PowerTV

ಆದಿತ್ಯ ಎಲ್​-1 ಸಕ್ಸಸ್​: ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ಸೂರ್ಯನ ಅಧ್ಯಯನ ನಡೆಸಲು ಇಸ್ರೋ ಬಾಹ್ಯಾಕಾಶ ಸಂಸ್ಥೆಯೂ ಕಳೆದ ಸೆಪ್ಟೆಂಬರ್​ ನಲ್ಲಿ ಆದಿತ್ಯ ಎಲ್​-1 ಅನ್ನು ಉಡಾವಣೆಯನ್ನು ಮಾಡಿತ್ತು ಈ ಉಪಗ್ರಹವು ಇಂದು ತನ್ನ ಕಕ್ಷೆಯನ್ನು ಯಾವುದೇ ಅಡೆತಡೆಗಳಿಲ್ಲದೇ ತನ್ನ ಗಮ್ಯ ಸ್ಥಾನವನ್ನು ಸೇರಿದೆ. ಈ ಹಿನ್ನೆಲೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ಇಸ್ರೋದ ಸಾಧನೆಯ ಕುರಿತು ಸಿಎಂ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿ್ದ್ದಾರೆ. ಈ ಪೋಸ್ಟ್​ನಲ್ಲಿ ಸೂರ್ಯನ ಅಧ್ಯಯನ ನಡೆಸುವ ಮಹತ್ವಾಕಾಂಕ್ಷೆಯ ಆದಿತ್ಯ ಎಲ್-1 ಯಶಸ್ವಿಯಾಗಿ ತನ್ನ ಕಕ್ಷೆ ಸೇರಿದ್ದು, ಈ ಮೂಲಕ ಇಸ್ರೋ ವಿಜ್ಞಾನಿಗಳು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಹಿರಿಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ದೀರ್ಘಕಾಲದ ಅಧ್ಯಯನ, ಪರಿಶ್ರಮ, ಸಂಕಲ್ಪದ ಮೂಲಕ ಅಸಾಧಾರಣವನ್ನು ಸಾಧಿಸಿದ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂದು ಇಸ್ರೋದ ವಿಜ್ಣಾನಿಗಳ ಸಾಧನೆಯನ್ನು ಕೋಂಡಾಡಿದ್ದಾರೆ.

Exit mobile version