Site icon PowerTV

ವಿಷಕಾರಿ ಚೇಳು ಇದ್ದ ಶೂ ಹಾಕಿಕೊಂಡು ಬಂದ ವಿದ್ಯಾರ್ಥಿ: ಮುಂದೇನಾಯ್ತು?

ಉಡುಪಿ: ಶಾಲೆಗೆ ಬಂದ ವಿದ್ಯಾರ್ಥಿಯ ಶೂ ಒಳಗೆ ವಿಷಕಾರಿ ಚೇಳು ಕಂಡುಬಂದಿದ್ದು ಕೆಲಹೊತ್ತು ಆತಂಕಕ್ಕೆ ಕಾರಣವಾಯಿತು. ಅದೃಷ್ಟವಶಾತ್ ವಿದ್ಯಾರ್ಥಿಗೆ ಏನೂ ಆಗಿಲ್ಲ.ಉಡುಪಿಯ ಇಂದ್ರಾಳಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಈ ಘಟನೆ ನಡೆದಿದೆ.

ಮನೆಯಿಂದ ಬರುವಾಗಲೇ ಶೂ ಒಳಗೆ ಏನೋ‌ ಇದೆ ಎಂದು ವಿದ್ಯಾರ್ಥಿ ಹೇಳುತ್ತಿದ್ದ. ಪರ್ಕಳದಿಂದ ಇಂದ್ರಾಳಿಯ ಶಾಲೆಗೆ ಬರುವವರೆಗೂ ಶೂ ಒಳಗೆ ಚೇಳು ಇತ್ತು. ಶಾಲೆಗೆ ಬಂದು ಗಮನಿಸಿದಾಗ ವಿಷಕಾರಿ ಚೇಳು ಶೂನಲ್ಲಿ ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಸೇರ್ಪಡೆಯಾದ ಒಂದೇ ವಾರದಲ್ಲಿ ಜಗನ್​ಮೋಹನ್​ ರೆಡ್ಡಿ ಪಕ್ಷ ತೊರೆದ ಕ್ರಿಕೇಟಿಗ ಅಂಬಟಿ ರಾಯುಡು!

ಚೇಳು ನೋಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೌಹಾರಿದ್ದಾರೆ. ಆದರೆ, ಶೂ ಒಳಗೆ ಸುಮ್ಮನೆ ಕುಳಿತಿದ್ದ ಚೇಳು, ಅದೃಷ್ಟವಶಾತ್ ವಿದ್ಯಾರ್ಥಿಗೆ ಕುಟುಕಲಿಲ್ಲ. ನಂತರ ವಿದ್ಯಾರ್ಥಿಯ ಪೋಷಕರಿಗೆ ಶಾಲೆಯ ಪ್ರಾಂಶುಪಾಲರು ಕರೆ ಮಾಡಿ ವಿಷಯ ತಿಳಿಸಿದ್ದಾರೆ.

Exit mobile version