Site icon PowerTV

ಊರ ಹಬ್ಬದಲ್ಲಿ ಹರಿದ ನೆತ್ತರು.. ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಚಿತ್ರದುರ್ಗ : ಆ ಗ್ರಾಮದಲ್ಲಿ ಊರ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಆದರೆ, ಈ ಸಂದರ್ಭಕ್ಕೆ ಕಾಯುತ್ತಿದ್ದ ಗುಂಪೊಂದು ನೆತ್ತರು ಹರಿಸಿದೆ.

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಯುವಕನನ್ನು ಹತ್ಯೆಗೈದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ನಾಗನಾಯಕನಕಟ್ಟೆ ಗ್ರಾಮದಲ್ಲಿ ನಡೆದಿದೆ.

ಮನೋಜ್ (21) ಹತ್ಯೆಯಾದ ಯುವಕ. ಈತ ಹೊಸದುರ್ಗ ತಾಲ್ಲೂಕಿನ ನಾಗನಾಯಕನಕಟ್ಟೆ ಗ್ರಾಮದ ನಿವಾಸಿ. ರಘು ಎಂಬಾತ ಕೊಲೆ ಮಾಡಿರುವ ಆರೋಪಿ. ಈತ ಹಿರಿಯೂರು ತಾಲ್ಲೂಕಿನ ಸೋಮೇನಹಳ್ಳಿ ತಾಂಡಾದ ನಿವಾಸಿ. ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದಾನೆ.

ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು

ಮೃತ ಮನೋಜ್ ಹಾಗೂ ರಘು ಮಧ್ಯೆ ಹಳೆ ವೈಷ್ಯಮ್ಯ ಇತ್ತು. ಗುರುವಾರ ತಡರಾತ್ರಿ ಊರ ಹಬ್ಬ ನಡೆಯುತ್ತಿದ್ದಾಗ ಐವರು ಸಹಚರರೊಂದಿಗೆ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಕೂಡಲೇ ಗಾಯಗೊಂಡಿದ್ದ ಮೋನೋಜ್​ನನ್ನ ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮನೋಜ್ ಕೊನೆಯುಸಿರೆಳೆದಿದ್ದಾನೆ.

ಸ್ಥಳಕ್ಕೆ ಶ್ರೀರಾಂಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಆರೋಪಿ ರಘು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Exit mobile version