Site icon PowerTV

ಖಂಡಿತ ನಾನು ದರ್ಶನ ನಟನೆಯ ಕಾಟೇರ ಸಿನಿಮಾ ನೋಡ್ತೀನಿ: ಕಿಚ್ಚ ಸುದೀಪ್​

ಬೆಂಗಳೂರು: ಕಾಟೇರ ಸಿನಿಮಾ ಬಿಡುಗಡೆಯಾದ ಕೇವಲ ಏಳೇ ದಿನಕ್ಕೆ ದಾಖಲೆಯ ಗಳಿಕೆ ಕಂಡು, ಇಡೀ ಸ್ಯಾಂಡಲ್‌ವುಡ್‌ ಸಿನಿಮಾ ಇಂಡಸ್ಟ್ರಿಯ ತಾಕತ್ತು ಪ್ರದರ್ಶಿಸಿದೆ. ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ಹೈಪ್‌ ಕ್ರಿಯೆಟ್‌ ಮಾಡಿದ್ದ ಕಾಟೇರ, ರಿಲೀಸ್‌ ಬಳಿಕ ಅದನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದೆ.

ಕಳೆದ ಎರಡು ದಿನಗಳ ಹಿಂದಷ್ಟೇ ಇಡೀ ಸ್ಯಾಂಡಲ್‌ವುಡ್‌ಗೆ ಕಾಟೇರ ಸಿನಿಮಾ ವೀಕ್ಷಣೆಗೆ ಆಮಂತ್ರಣ ನೀಡಿದ್ದರು ರಾಕ್‌ಲೈನ್‌ ವೆಂಕಟೇಶ್‌. ಹಿರಿ ಕಿರಿ ಕಲಾವಿದರೂ ಆಗಮಿಸಿ ದರ್ಶನ್‌ ಸಿನಿಮಾ ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಮಂತ್ರಣದ ಮೇರೆಗೆ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಆಗಮಿಸಿ ಕಾಟೇರನನ್ನು ಕಣ್ತುಂಬಿಕೊಂಡಿದ್ದರು. ಅದೇ ರೀತಿ ಕಾಟೇರ ಸಿನಿಮಾ ವೀಕ್ಷಣೆಗೆ ಕಿಚ್ಚ ಸುದೀಪ್‌ ಅವರಿಗೂ ಇನ್ವಿಟೇಷನ್‌ ಹೋಗಿದೆ ಎಂದು ಸ್ವತಃ ನಿರ್ದೇಶಕ ತರುಣ್‌ ಸುಧೀರ್‌ ಹೇಳಿದ್ದಾರೆ.

ಇದನ್ನೂ ಓದಿ: ಗೋವಾದಲ್ಲಿ ಅಪರೂಪದ ಪ್ರಾಚೀನ ಕನ್ನಡ ಶಾಸನ ಪತ್ತೆ

ಕಿಚ್ಚ ಸುದೀಪ್‌ ಸದ್ಯ ಮ್ಯಾಕ್ಸ್‌ ಸಿನಿಮಾದ ಕ್ಲೈಮ್ಯಾಕ್ಸ್‌ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಆ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸುದೀಪ್‌ ಭಾಗವಹಿಸಿದ್ದಾರೆ. ಅವರಿಗೂ ರಾಕ್‌ಲೈನ್‌ ವೆಂಕಟೇಶ್‌ ಅವರ ಕಡೆಯಿಂದ ಆಮಂತ್ರಣ ತಲುಪಿದೆ. ಕಾಟೇರ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದಕ್ಕೆ ಶುಭಾಶಯ ತಿಳಿಸಿದ್ದಾರೆ. ರಾಕ್‌ಲೈನ್‌ ಅವರ ಮಾತಿಗೆ ಉತ್ತರಿಸಿದ ಸುದೀಪ್, “ಖಂಡಿತ, ನಾನೂ ಕಾಟೇರ ಸಿನಿಮಾ ನೋಡ್ತಿನಿ. ಆದರೆ, ಸದ್ಯ ನಾನು ಶೂಟಿಂಗ್‌ನಲ್ಲಿದ್ದೇನೆ. ಅದು ಮುಗಿಸಿ ಬಂದ ಮೇಲೆ ನೋಡುತ್ತೇನೆ” ಎಂದು ನಮ್ಮ ನಿರ್ಮಾಪಕರ ಮುಂದೆ ತಿಳಿಸಿದ್ದಾರೆ ಎಂದು ನಿರ್ದೇಶಕ ತರುಣ್‌ ಕಿಶೋರ್‌ ಸುಧೀರ್‌, ಖಾಸಗಿ ವಾಗಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Exit mobile version