Site icon PowerTV

ದುಬಾರಿ ಬೆಲೆಗೆ ರಕ್ತ ಮಾರಾಟಕ್ಕೆ ಕಡಿವಾಣ!

ಬೆಂಗಳೂರು: ಆಸ್ಪತ್ರೆಗಳು ಮತ್ತು ರಕ್ತನಿಧಿಗಳು ರಕ್ತವನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಸರಕಾರ ಅದೇಶ ಹೊರಡಿಸಿದೆ ಎಂಬುದಾಗಿ ಆಂಗ್ಲ ಮಾಧ್ಯಮ ವೊಂದು ವರದಿ ಮಾಡಿದೆ.

ರಕ್ತಕ್ಕೆ ದುಬಾರಿ ದರ ವಿಧಿಸುವುದನ್ನು ತಪ್ಪಿಸಲು ಈ ನಿರ್ಣಯ ತೆಗೆದುಕೊಳ್ಳಲಾಗಿದೆ. 62ನೇ ಉದ್ದೀಪನ ಸಲಹಾ ಸಮಿತಿ ಸಭೆಯಲ್ಲಿ ಮೇಲಿನ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿದ್ದ ತಜ್ಞರು ರಕ್ತವನ್ನು ಮಾರಾಟ ಮಾಡಬಾರದು ಎಂಬ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಶಾಲಾ ವಾಹನ ಚಾಲಕರಿಗೆ ಪೊಲೀಸ್​ ವೆರಿಫಿಕೇಷನ್‌ ಕಡ್ಡಾಯ!

ಪ್ರಸ್ತುತ ಆಸ್ಪತ್ರೆಗಳು, ರಕ್ತನಿಧಿಗಳಲ್ಲಿ ಒಂದು ಯುನಿಟ್ ರಕ್ತಕ್ಕೆ ಸರಾಸರಿ 2 ಸಾವಿರ ರೂ.ಗಳಿಂದ 6 ಸಾವಿರ ರೂ.ಗಳವರೆಗೆ ಹಣ ಪಡೆಯಲಾಗುತ್ತಿದೆ. ಕೇಂದ್ರ ಸರಕಾರ ಇತರ ಎಲ್ಲ ಶುಲ್ಕಗಳನ್ನು ರದ್ದು ಮಾಡಿರುವುದರಿಂದ ರಕ್ತ ನೀಡುವ ಆಸ್ಪತ್ರೆ, ರಕ್ತನಿಧಿಗಳು ಸಾಮಾನ್ಯ ರಕ್ತಕ್ಕೆ 250 ರೂ.ಗಳಿಂದ 1,550 ರೂ. ಮಾತ್ರ ಪಡೆಯಬೇಕಾಗುತ್ತದೆ. ಪ್ಲಾಸ್ಲಾ, ಪ್ಲೇಟ್‌ಲೆಟ್‌ಗಳಿಗಾದರೆ ಒಂದು ಯೂನಿಟ್‌ಗೆ 400 ರೂ. ಮಾತ್ರ ಹಣ ಪಡೆಯಬೇಕು. ರಕ್ತಪೂರೈಕೆ ಮಾಡುವಾಗ ಹೆಚ್ಚುವರಿ ಪರೀಕ್ಷೆಗಳಿಗೆ ಸರಕಾರ ಪ್ರತ್ಯೇಕ ದರ ನಿಗದಿಪಡಿಸಲಿದೆ.

Exit mobile version