Site icon PowerTV

ಉಕ್ರೇನ್ ದಾಳಿಗೆ ಕ್ಷಿಪಣಿ ಬಳಸಿದ ರಷ್ಯಾ ಸೇನೆ

ಬೆಂಗಳೂರು : ರಷ್ಯಾ ಸೇನೆಯು ಉತ್ತರ ಕೊರಿಯಾ ನಿರ್ಮಿತ ಕ್ಷಿಪಣಿಗಳನ್ನು ಬಳಸಿ ಉಕ್ರೇನ್‌ನ ಪ್ರಮುಖ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಅಮೆರಿಕ ಹೇಳಿದೆ.

ಉಕ್ರೇನ್ ಮೇಲೆ ಯುದ್ಧವನ್ನು ಮುಂದುವರಿಸಲು ರಷ್ಯಾವು ಇತರ ದೇಶಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಅಮೆರಿಕ ಗುಪ್ತಚರ ಮೂಲಗಳು ತಿಳಿಸಿವೆ.

ಡಿಸೆಂಬರ್ 30 ಮತ್ತು ಜನವರಿ 2ರಂದು ನಡೆದ ಎರಡು ದಾಳಿಗಳಲ್ಲಿ ರಷ್ಯಾವು ಉತ್ತರ ಕೊರಿಯಾ ಒದಗಿಸಿದ ಕ್ಷಿಪಣಿಗಳನ್ನು ಬಳಸಿದೆ ಎಂದು ಶ್ವೇತ ಭವನದ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.

ರಷ್ಯಾವು ಇರಾನ್‌ ನಿಂದಲೂ ಖಂಡಾಂತರ ಕ್ಷಿಪಣಿಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾವು ಇರಾನ್ ನಿರ್ಮಿತ ಡೋನ್‌ಗಳನ್ನು ಬಳಸಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ 550 ಮೈಲುಗಳಷ್ಟು ದೂರದಿಂದ ಹಾರಿಸಬಹುದಾದ ಉತ್ತರ ಕೊರಿಯಾ ನಿರ್ಮಿತ ಖಂಡಾಂತರ ಕ್ಷಿಪಣಿಗಳನ್ನು ಬಳಸುವುದಕ್ಕೆ ರಷ್ಯಾ ಯೋಜನೆ ರೂಪಿಸಿದೆ ಎಂದು ಜಾನ್ ಕಿರ್ಬಿ ಮಾಹಿತಿ ನೀಡಿದ್ದರೆ.

Exit mobile version