Site icon PowerTV

ಕಬಡ್ಡಿ ಪಂದ್ಯದ ವೇಳೆ ಯುವಕನ ಮೇಲೆ ಹಲ್ಲೆ

ಬೆಳಗಾವಿ : ಕಬಡ್ಡಿ ಪಂದ್ಯದ ವೇಳೆ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಕಬಡ್ಡಿ ಆಡುತ್ತಿದ್ದ ತಂಡಗಳ ಬೆಂಬಲಿಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಉಂಟಾಗಿದೆ. ಗಲಾಟೆ ವೇಳೆ ಯುವಕನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ.

ಹುಕ್ಕೇರಿ ಪಟ್ಟಣದ ನಿವಾಸಿ ವಿನಾಯಕ‌ ಎಂಬಾತ ಹಲ್ಲೆಗೊಳಗಾದ ಯುವಕ. ಯುವಕನ ಮುಖಕ್ಕೆ ಗಂಭೀರ ಗಾಯವಾಗಿದೆ. ಹಲ್ಲೆಗೊಳಗಾದ ಯುವಕನಿಗೆ ಹುಕ್ಕೇರಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹಳೆ ದ್ವೇಷದ ಹಿನ್ನೆಲೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವುದಾಗಿ ತಿಳಿದುಬಂದಿದೆ. ಹಿಡಕಲ್ ಡ್ಯಾಂ ಗ್ರಾಮದ ಯುವಕರ ಗುಂಪಿನಿಂದ ಹಲ್ಲೆ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

Exit mobile version