Site icon PowerTV

ಎಣ್ಣೆ ಕೊಡಿಸದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ, ತುಟಿಗೆ ಪ್ಲಾಸ್ಟಿಕ್ ಸರ್ಜರಿ

ಬೆಂಗಳೂರು : ಎಣ್ಣೆ ಕೊಡಿಸದಿದ್ದಕ್ಕೆ ದುಷ್ಕರ್ಮಿಯೊಬ್ಬ ಹಿರಿಯ ನಾಗರಿಕನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.

ಸಿಂಗಾರ ವೇಲು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಇವರು ಗಿರಿನಗರದ ಮೂಕಾಂಭಿಕನಗರದ ನಿವಾಸಿ ಎಂದು ತಿಳಿದುಬಂದಿದೆ. ಧರ್ಮ ಎಂಬಾತನೇ ಹಲ್ಲೆ ಮಾಡಿರುವ ಆರೋಪಿ. ಕೃತ್ಯದ ನಂತರ ಆರೋಪಿ ತಲೆಮರೆಸಿಕೊಂಡಿದ್ದಾನೆ.

ವೇಲು ಅವರು ತಮ್ಮ ಮನೆಯ ಬಳಿ ಕಬಾಬ್ ತಿನ್ನುತ್ತಿದ್ದರು. ಈ ವೇಳೆ ಆರೋಪಿ ಧರ್ಮ ಬಂದು ತನಗೆ ಎಣ್ಣೆ ಕೊಡಿಸು ಅಂತ ಪೀಡಿಸಿದ್ದಾನೆ. ಮದ್ಯ ಕೊಡಿಸದಿದ್ದಾಗ ಕುಪಿತಗೊಂಡ ಧರ್ಮ, ವೇಲು ಅವರಿಗೆ ಕಾಲಲ್ಲಿ ಒದ್ದಿದ್ದಲ್ಲದೇ, ಇಟ್ಟಿಗೆಯಿಂದ ಮುಖಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ತುಟಿಗೆ ಪ್ಲಾಸ್ಟಿಕ್ ಸರ್ಜರಿ

ಘಟನೆಯಲ್ಲಿ ಸಿಂಗಾರ ವೇಲು ಅವರ ತುಟಿ ಹರಿದುಹೋಗಿದ್ದು, ಆಸ್ಪತ್ರೆಗೆ ದಾಖಲಿಸಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಲಾಗಿದೆ. ಸದ್ಯ, ಹಲ್ಲೆಯ ಸಂಪೂರ್ಣ ದೃಶ್ಯವಾಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಠಾಣಾ ಪೊಲೀಸರು ಆರೋಪಿ ಧರ್ಮನ ಪತ್ತೆಗೆ ಬಲೆ ಬೀಸಿದ್ದಾರೆ.

Exit mobile version