Site icon PowerTV

ಅಬ್ಬಬ್ಬಾ.. ಬೈಕ್ ಸವಾರನಿಗೆ ಮಾರುದ್ದದ ದಂಡದ ಬಿಲ್ : ಫೈನ್ ಎಷ್ಟು ಗೊತ್ತಾ?

ಶಿವಮೊಗ್ಗ : ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ದಂಡಾಸ್ತ್ರ ಪ್ರಯೋಗಿಸಿದ್ದಾರೆ.

ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸಿದ್ದ ಬೈಕ್​ ಚಾಲಕನಿಗೆ ಮಾರುದ್ದದ ದಂಡದ ಬಿಲ್​ ಹಾಕಿದ್ದಾರೆ. ಒಂದೇ ಬೈಕ್​ಗೆ ಬರೋಬ್ಬರಿ 17 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಬಿಲ್ ಉದ್ದ ನೋಡಿ ಬೈಕ್ ಚಾಲಕ ಶಾಕ್ ಆಗಿದ್ದಾನೆ. ಈ ದಂಡದ ಬಿಲ್ ಒಂದೂವರೆ ಮೀಟರ್​ ಉದ್ದವಿದೆ.

ಡಿಯೋ ಬೈಕ್‌ ಚಾಲಕನೊಬ್ಬ ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದು ಪೊಲೀಸರ ಗಮನಕ್ಕೆ ಬಂದಿತ್ತು. ಈ ಬೈಕ್​ ಅನ್ನು ಪತ್ತೆ ಹಚ್ಚಿದ ಸಂಚಾರ ಠಾಣೆ ಸಿಬ್ಬಂದಿ ಸುರೇಶ್‌ ವಶಕ್ಕೆ ಪಡೆದು ಠಾಣೆಗೆ ತಂದಿದ್ದರು.

ಬೈಕ್ ದಂಡ ಪರಿಶೀಲಿಸಿದಾಗ ಪಟ್ಟಿ ದೊಡ್ಡದೇ ಇತ್ತು. ವಿವಿಧ ಸಂದರ್ಭ, ವಿವಿಧ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ 17 ಸಾವಿರ ರೂ. ದಂಡ ವಿಧಿಸಲಾಗಿದೆ. ಬೈಕ್ ಮಾಲೀಕನನ್ನು ಠಾಣೆಗೆ ಕರೆಯಿಸಿ ದಂಡ ಕಕ್ಕಿಸಲಾಗಿದೆ.

Exit mobile version