Site icon PowerTV

7 ವರ್ಷ ಹಿಂದಿನ ದತ್ತ ಪೀಠ ಕೇಸ್​ಗೆ ಮರುಜೀವ ನೀಡಿದ ಕಾಂಗ್ರೆಸ್?

ಬೆಂಗಳೂರು : 2017ರ ಚಿಕ್ಕಮಗಳೂರಿನ ದತ್ತಪೀಠ ಗೋರಿ ಒಡೆದಿದ್ದ ಪ್ರಕರಣವನ್ನು ರಾಜ್ಯ ಕಾಂಗ್ರೆಸ್​ ಸರ್ಕಾರ ಮತ್ತೆ ಓಪನ್ ಮಾಡಿದೆ. ಈ ಪ್ರಕರಣ ಸಂಬಂಧ 14 ಜನರಿಗೆ ಕೋರ್ಟ್​ಗೆ ಹಾಜರಾಗುವಂತೆ ಸಮನ್ಸ್ ಜಾರಿ ಆಗಿದೆ.

ಹುಬ್ಬಳ್ಳಿಯ ಕರಸೇವಕರು ಎನ್ನಲಾದವರ ಪ್ರಕರಣವನ್ನು ಮರು ಕೈಗೆತ್ತಿಕೊಂಡ ಬೆನ್ನಲ್ಲೇ ಇದೀಗ ದತ್ತಪೀಠ ಹೋರಾಟಗಾರರ ಮೇಲಿನ ಪ್ರಕರಣವನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಬಿಜೆಪಿ ಸರ್ಕಾರ ಹಿಂಪಡೆದಿದ್ದ ಪ್ರಕರಣಕ್ಕೆ ಕಾಂಗ್ರೆಸ್​ ಸರ್ಕಾರ ಮರುಜೀವ ನೀಡಿದೆ.

2021ರಲ್ಲಿ ಅಂದಿನ ಬಿಜೆಪಿ ಸರ್ಕಾರ ಕೇಸ್ ಹಿಂಪಡೆದಿತ್ತು. ಜನವರಿ 8ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ. ಇನ್ನೂ ಬಿಜೆಪಿಯಿಂದ ಮತ್ತೆ ಹೋರಾಟ ಮುಂದುವರಿಯುವ ಮುನ್ಸೂಚನೆ ಇದೆ ಎಂದು ತಿಳಿದುಬಂದಿದೆ.

ಯಾರಿಗೆಲ್ಲಾ ನೋಟಿಸ್?

14 ಹಿಂದೂ ಕಾರ್ಯಕರ್ತರ ಮೇಲಿನ ಕೇಸ್

ತುಡುಕೂರು ಮಂಜು, ಶಿವರಾಜ್‌, ಅಶೋಕ್

ತೇಜು, ಶ್ರೀನಾಥ್, ಲೋಕೇಶ್‌, ಮಹೇಂದ್ರ

ಸಂದೀಪ್‌ ರಾಮು, ಶ್ರೀನಾಥ್‌, ಲೋಕೇಶ್‌

ಮಹೇಂದ್ರ, ಸಂದೀಪ್‌ ರಾಮು, ಸಂದೇಶ್‌ ಸುಮಂತ್

ನಾಗ, ನಾಗೇಂದ್ರ ಪೂಜಾರಿ, ಮೋಹನ್‌ಗೆ ನೋಟಿಸ್

Exit mobile version