Site icon PowerTV

ನಿಮ್ಮ ಮುಂದಿನ ಟಾರ್ಗೆಟ್ ಕಲಬುರ್ಗಿನಾ? : ಆರ್. ಅಶೋಕ ಕಿಡಿ

ಬೆಂಗಳೂರು : ದತ್ತ ಪೀಠ ಗೋರಿ ಒಡೆದಿದ್ದ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಂಡಿರುವ ಕಾಂಗ್ರೆಸ್​ ಸರ್ಕಾರದ ಕ್ರಮಕ್ಕೆ ವಿಪಕ್ಷ ನಾಯಕ ಆರ್. ಅಶೋಕ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ. ಚಿಕ್ಕಮಗಳೂರಿನಲ್ಲಿ ದತ್ತಪೀಠ ಪ್ರಕರಣದ ಮರು ತನಿಖೆ. ಮುಂದಿನ ಟಾರ್ಗೆಟ್ ಕಲಬುರ್ಗಿನಾ? ಎಂದು ಗುಡುಗಿದ್ದಾರೆ.

ಆಯೋಧ್ಯೆ ರಾಮಮಂದಿರದ ಉದ್ಘಾಟನೆಯ ಹೊಸ್ತಿಲಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಿನೇ ದಿನೆ ದಬ್ಬಾಳಿಕೆ ಹೆಚ್ಚುತ್ತಿದೆ. ಇದನ್ನು ನೋಡಿದರೆ, ಧರ್ಮದ ಹೆಸರಿನಲ್ಲಿ ಕಿಚ್ಚು ಹೊತ್ತಿಸಿ ಆ ಮಸಿಯನ್ನು ರಾಮನಿಗೆ ಬಳಿಯಿರಿ ಅಂತ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ಹುಕುಂ ನೀಡಿದಂತಿದೆ ಎಂದು ಛೇಡಿಸಿದ್ದಾರೆ.

ದತ್ತಪೀಠ ಮರು ತನಿಖೆಯೂ ಕಾಕತಾಳೀಯವೇ?

ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲೇ ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನವಾಗಿದ್ದು ಕೇವಲ ಕಾಕತಾಳೀಯ ಎಂದರಲ್ಲ ಸಿಎಂ ಸಿದ್ದರಾಮಯ್ಯನವರೇ, ಈಗ ದತ್ತಪೀಠ ಪ್ರಕರಣದ ಮರು ತನಿಖೆಯೂ ಕಾಕತಾಳೀಯವೇ? ಅಥವಾ ನಿಮ್ಮ ಕುತಂತ್ರದ ಮುಂದುವರಿದ ಭಾಗವೇ? ಅಯೋಧ್ಯೆಯ ಭವ್ಯ ರಾಮಮಂದಿರದ ಉದ್ಘಾಟನೆಯ ಸಂಭ್ರಮದಲ್ಲಿರುವ ಕನ್ನಡಿಗರ ಸಡಗರಕ್ಕೆ ಭಂಗ ತರುವುದೇ ನಿಮ್ಮ ಇರಾದೆ ಅಲ್ಲವೇ ಸಿದ್ದರಾಮಯ್ಯನವರೇ? ಎಂದು ಆರ್. ಅಶೋಕ ಚಾಟಿ ಬೀಸಿದ್ದಾರೆ.

Exit mobile version