Site icon PowerTV

ರಾಮಮಂದಿರ ಉದ್ಘಾಟನೆ ದಿನ ಪ್ರಧಾನಿ ಮೋದಿ ಉಪವಾಸ!

ನವದೆಹಲಿ : ಕೋಟ್ಯಂತರ ರಾಮಭಕ್ತರ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯನ್ನು ಕಣ್ತುಂಬಿಕೊಂಡು ಪುನೀತರಾಗಲು ದೇಶಾದ್ಯಂತ ಹಿಂದೂಗಳು ಕಾತರರಾಗಿದ್ದಾರೆ.

ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದು, ಆ ಮಹತ್ವದ ದಿನ ವಿಶೇಷ ವ್ರತ ಕೈಗೊಳ್ಳಲಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಅದ್ಧೂರಿಯಾಗಿ ನೆರವೇರಲಿದೆ. ಅಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಜೊತೆಗೆ ವಿಶೇಷ ಹೋಮ-ಹವನ ಜರುಗಲಿದೆ. ಉದ್ಘಾಟನೆ ದಿನ ಪ್ರಧಾನಿ ಮೋದಿ ಅವರು ಉಪವಾಸ ಕೈಗೊಳ್ಳಲಿದ್ದಾರೆ. ಅದೊಂದು ದಿನ ಏನೂ ತಿನ್ನುವುದು ಬೇಡ ಎಂದು ಮೋದಿ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಮಲಲ್ಲಾ ಪ್ರತಿಷ್ಠಾಪನೆ ವೇಳಾಪಟ್ಟಿ

Exit mobile version