Site icon PowerTV

ಸಿರಾಜ್ ಬೆಂಕಿ ಬೌಲಿಂಗ್.. ಕೇವಲ 55 ರನ್​ಗಳಿಗೆ ದಕ್ಷಿಣ ಆಫ್ರಿಕಾ ಆಲೌಟ್

ಬೆಂಗಳೂರು : ಹರಿಣಗಳ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಭಾರತದ ವೇಗಿಗಳು ಬೆಂಕಿಯಂತಹ ಪ್ರದರ್ಶನ ನೀಡಿದ್ದಾರೆ.

ಕೇಪ್​ಟೌನ್​ ಟೆಸ್ಟ್​ನ ಮೊದಲ ದಿನ ಭಾರತ ಬೌಲರ್​ಗಳ ದಾಳಿಗೆ ದಕ್ಷಿಣ ಆಫ್ರಿಕಾ ಅಕ್ಷರಶಃ ತತ್ತರಿಸಿತು. ಕೇವಲ 55 ರನ್​ಗಳಿಗೆ ಹರಿಣಗಳು ಸರ್ವಪತನ ಕಂಡರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹರಿಣಗಳ ಲೆಕ್ಕಾಚಾರವನ್ನು ಭಾರತ ಉಲ್ಟಾ ಮಾಡಿತು. ಮೊಹಮ್ಮದ್ ಸಿರಾಜ್ ದಾಳಿಗೆ ದಕ್ಷಿಣ ಆಫ್ರಿಕಾ ಬ್ಯಾಟರ್​ಗಳು ತರಗೆಲೆಗಳಂತೆ ವಿಕೆಟ್ ಒಪ್ಪಿಸಿದರು. 9 ಓವರ್ ಬೌಲಿಂಗ್ ಮಾಡಿದ ಸಿರಾಜ್ ಕೇವಲ 15 ರನ್​ ನೀಡಿ 6 ವಿಕೆಟ್ ಕಬಳಿಸಿದರು. ಅಲ್ಲದೆ, 3 ಓವರ್ ಮೇಡಿನ್ ಮಾಡಿದರು.

ದಕ್ಷಿಣ ಆಫ್ರಿಕಾ ಪರ ಡೇವಿಡ್ ಬೆಡಿಂಗ್‌ಹ್ಯಾಮ್ 12 ಹಾಗೂ ಕೈಲ್ ವೆರ್ರೆನ್ನೆ 15 ಗಳಿಸಿದರು. ಉಳಿದಂತೆ ಯಾವೊಬ್ಬ ಬ್ಯಾಟರ್ ಸಹ ಎರಡಂಕಿ ದಾಟಲಿಲ್ಲ. ನಾಯಕ ಡೀನ್ ಎಲ್ಗರ್ 4, ನಾಂಡ್ರೆ ಬರ್ಗರ್ 4, ಐಡೆನ್ ಮಾರ್ಕ್ರಾಮ್ 2, ಟೋನಿ ಡಿ ಝೋರ್ಝಿ 2, ಟ್ರಿಸ್ಟಾನ್ ಸ್ಟಬ್ಸ್ 3, ಕಗಿಸೊ ರಬಾಡ 5, ಕೇಶವ್ ಮಹಾರಾಜ್ 3 ರನ್ ಗಳಿಸಿದರು.

ಭಾರತದ ಪರ ಮೊಹಮ್ಮದ್ ಸಿರಾಜ್ 6, ಮುಕೇಶ್ ಕುಮಾರ್ ಹಾಗೂ ಜಸ್​ಪ್ರೀತ್ ಬುಮ್ರಾ ತಲಾ 2 ವಿಕೆಟ್ ಕಬಳಿಸಿದರು.

Exit mobile version