Site icon PowerTV

ರಾಮನ ವಿರೋಧ ಮಾಡೋರ ತೊಡೆ ಮುರಿಯುತ್ತೇವೆ : ಶಾಸಕ ಚನ್ನಬಸಪ್ಪ

ಬೆಂಗಳೂರು : ಶ್ರೀರಾಮನ ವಿರೋಧ ಯಾರು ಮಾಡ್ತಿರೋ ನಾವು ಅವರ ತೊಡೆ ಮುರಿಯುತ್ತೇವೆ. ಭೀಮ ದುರ್ಯೋಧನನ ತೊಡೆ ಮುರಿದಂತೆ ಮುರಿಯುತ್ತೇವೆ ಎಂದು ಶಾಸಕ ಚನ್ನಬಸಪ್ಪ ಚಿನ್ನಿ ಗುಡುಗಿದರು.

ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಾವು ರಾಮನ ಭಂಟರು. ಕಾಂಗ್ರೆಸ್ ನ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.

ನೀವು ಹಿಂದೂ ವಿರೋಧಿಗಳು. ಅದಕ್ಕೆ ನಿಮ್ಮ ಅಂತ್ಯಸಂಸ್ಕಾರ ಮಾಡುತ್ತೇವೆ. ನಿಮ್ಮನ್ನು ಹೆಡೆಮುರಿ ಕಟ್ಟೋಕೆ ಹಿಂದೂ ಸಮಾಜದವರು ಸಿದ್ಧವಾಗಿದ್ದೇವೆ. ತಪ್ಪು ಒಪ್ಪಿಕೊಂಡು ರಾಮನ ಪೂಜೆ ಮಾಡಿ. ನಿಮ್ಮನ್ನು ಕ್ಷಮಿಸುತ್ತೇವೆ. ಇಲ್ಲವಾದರೆ ನಿಮ್ಮ ಹೆಡೆಮುರಿ ಕಟ್ಟುತ್ತೇವೆ‌ ಎಂದು  ಎಚ್ಚರಿಕೆ ನೀಡಿದ್ದಾರೆ.

ಸಿದ್ರಾಮುಲ್ಲಾಖಾನ್ ಅಂತ ಹೆಸರು ಬದಲಿಸಿಕೊಳ್ಳಿ

ಸಿದ್ದರಾಮಯ್ಯ ಬಾಬರ್ ಸಂಸತಿ. ಸಿದ್ದರಾಮ ಎಂದು ಹೆಸರು ಇಟ್ಟುಕೊಂಡಾಕ್ಷಣ ರಾಮನ ಭಕ್ತ ಆಗೋದಿಲ್ಲ. ನೀವು ಹೆಸರು ಬದಲಾವಣೆ ಮಾಡಿಕೊಳ್ಳಿ. ಸಿದ್ರಾಮುಲ್ಲಾಖಾನ್ ಎಂದು ಹೆಸರು ಬದಲಿಸಿಕೊಳ್ಳಿ. ನೀವು ಹಿಂದೂ ವಿರೋಧಿ, ನಾವೆಲ್ಲಾ ಕರಸೇವಕರು. ತಾಕತ್ತು ಇದ್ರೆ ನನ್ನನ್ನ ಬಂಧನ ಮಾಡಿ ಸಿದ್ರಾಮುಲ್ಲಾಖಾನ್ ಎಂದು ಸಿಎಂಗೆ ಸವಾಲೆಸೆದರು.

ನಿಮ್ಮ ಲಾಠಿಗೆ ಹಿಂದೂಗಳು ಹೆರೋದಿಲ್ಲ‌

ನಿಮ್ಮ ಗೊಡ್ಡು ಲಾಠಿಗೆ ಹೆದರುವ ಪ್ರಶ್ನೆಯೆ ಇಲ್ಲ. ನಾವು ಗುಂಡಿಗೆ ಹೆದರಿಲ್ಲ, ನೀವು ನಮ್ಮ ಹೆದರಿಸ್ತಿರಾ..? ನಿಮ್ಮ ಲಾಠಿಗೆ ನಾವು ಹೆರೋದಿಲ್ಲ‌. ಬಹಳ ನೋವಿನಿಂದ ಹೇಳ್ತಾ ಇದ್ದೇನೆ, ನಿಮ್ಮ ಹೆಸರು ಬದಲಿಸಿಕೊಳ್ಳಿ ಎಂದು ಶಾಸಕ ಚನ್ನಬಸಪ್ಪ ಚಿನ್ನಿ ಹರಿಹಾಯ್ದರು.

Exit mobile version