Site icon PowerTV

ರಾಮ ಭಕ್ತರು ಹರಿಪ್ರಸಾದ್​ನ ಪುಡಿಪುಡಿ ಮಾಡ್ತಾರೆ : ಸದಾನಂದ ಗೌಡ

ಬೆಂಗಳೂರು : ಗೋದ್ರಾದಂತ ಹತ್ಯಾಕಾಂಡ ಸೃಷ್ಟಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಕಾಂಗ್ರೆಸ್​ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರು ಅವರು, ನಿಜವಾಗಲೂ ಹರಿಪ್ರಸಾದ್ ಅವರಿಗೆ ರಕ್ಷಣೆ ಬೇಕು. ರಾಮ‌ಭಕ್ತರು ಹರಿಪ್ರಸಾದ್​ನ ಎಲ್ಲಿ ಪುಡಿ ಪುಡಿ ಮಾಡ್ತಾರೆ ಗೊತ್ತಿಲ್ಲ. ಇಂತವರನ್ನ ಕಾಂಗ್ರೆಸ್ ಕೂಡಲೇ ಪಕ್ಷದಿಂದ ಹೊರ ಹಾಕಬೇಕು ಎಂದು ಕಿಡಿಕಾರಿದ್ದಾರೆ.

ಸರ್ಕಾರ ಬಂಧಿಸಿ ಅವರನ್ನ ವಿಚಾರಣೆಗೊಳಪಡಿಸಬೇಕು. ಇದೊಂದು ತಲೆಕೆಟ್ಟವರ ಮತ್ತು ಆ ಘಟನೆಯ ಬಗ್ಗೆ ಮಾಹಿತಿ ಇಲ್ಲದವರ ಮಾತು. ಇನ್ನು ಕೆಲವರು ಮಿದುಳನ್ನ ಚೀಲದಲ್ಲಿ ಇಟ್ಕೊಂಡು ಓಡಾಡ್ತಾರೆ. ಅಂತಹವರಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಕೂಡ. ಹೀಗಾಗಿ, ರಾಮ ಬದಲು ಸಿದ್ದರಾಮಯ್ಯರನ್ನ ಪೂಜಿಸುತ್ತೇವೆ ಎಂದು ಒಲೈಕೆ ಮಾತು ಹೇಳಿದ್ದಾರೆ ಎಂದು ಸದಾನಂದ ಗೌಡ ವಾಗ್ದಾಳಿ ನಡೆಸಿದ್ದಾರೆ.

Exit mobile version