Site icon PowerTV

ಬಿಜೆಪಿಯಲ್ಲಿ ಮೂರು ಬಾಗಿಲು ಇದ್ದದ್ದು ಸತ್ಯ : ಸದಾನಂದ ಗೌಡ

ಬೆಂಗಳೂರು : ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬ ಸಿಎಂ ಸಿದ್ದರಾಮಯ್ಯ ಟೀಕೆಗೆ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್​ ಪಕ್ಷದಲ್ಲಿ ಎಷ್ಟು ಬಾಗಿಲು ಇದೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ನೋಡಿಕೊಳ್ಳಲಿ ಎಂದು ಕುಟುಕಿದ್ದಾರೆ.

ನಮ್ಮದು ಒಂದು ಬಾಗಿಲೋ, ಮೂರು ಬಾಗಿಲೋ ಅಂತ ಯೋಚನೆ ಮಾಡ್ತಾ ಕುಳಿತರೆ ಆಡಳಿತ ಸುಸೂತ್ರವಾಗಿ ನಡೆಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಬೇರೆ ಪಕ್ಷದ ಮೇಲೆ ಕಣ್ಟಿಟ್ಟು ಕೆಲಸ ಮಾಡುವುದಲ್ಲ. ಜನರ ಸಮಸ್ಯೆಗಳ ಮೇಲೆ ಕಣ್ಣಿಟ್ಟು ಕೆಲಸ ಮಾಡಲಿ. ಬಿಜೆಪಿಯಲ್ಲಿ ಒಂದು ಕಾಲದಲ್ಲಿ ಮೂರು‌ ಬಾಗಿಲಿತ್ತು ನಿಜ. ಆದರೆ, ಇವಾಗ ಎಲ್ಲಾ ಬಾಗಿಲುಗಳನ್ನು ಬಂದ್ ಮಾಡಿ ಒಂದು ಬಾಗಿಲು ಮಾಡಿದ್ದೇವೆ. ಇದು ಅವರಿಗೆ ಗೊತ್ತಾಗಿಲ್ಲ ಅಂದರೆ ಹೇಗೆ? ಎಂದು ವಾಗ್ದಾಳಿ ನಡೆಸಿದ್ದಾರೆ.

‘ಕೈ’ನಲ್ಲಿರುವ ಗುಂಪು ನಮ್ಮಲ್ಲಿ ಇಲ್ಲ

ಕಾಂಗ್ರೆಸ್ ಪಕ್ಷದಲ್ಲಿರುವ ಗುಂಪು ನಮ್ಮಲ್ಲಿ ಇಲ್ಲವೇ ಇಲ್ಲ. ಸಿಎಂ ಏನೋ ಮಾಡಿಕೊಂಡಿದ್ದಾರಲ್ಲ ಆರ್ಥಿಕ ಸಲಹೆಗಾರರಾಗಿ. ವಿವಿಧ ಸಲಹೆಗಾರರಾಗಿ ನೇಮಕ ಮಾಡಿಕೊಂಡಿರೋದು ಅವರ ಬಾಗಿಲುಗಳನ್ನು ಬಂದ್ ಮಾಡಿಕೊಳ್ಳುವುದಕ್ಕಾ..? ಎಂದು ಸಿಎಂ ಸಿದ್ದರಾಮಯ್ಯರಿಗೆ ಸದಾನಂದ ಗೌಡ ಪ್ರಶ್ನೆ ಮಾಡಿದ್ದಾರೆ.

Exit mobile version