Site icon PowerTV

ಗೋಧ್ರಾದಲ್ಲಿ ಹಿಂದೂಗಳನ್ನು ಸುಟ್ಟವರು ಮುಸ್ಲಿಮರು : ಅರವಿಂದ ಬೆಲ್ಲದ್

ಹುಬ್ಬಳ್ಳಿ : ಗೋಧ್ರಾದಂತ ಹತ್ಯಾಕಾಂಡ ಸೃಷ್ಟಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ವಿರೋಧ ಪಕ್ಷದ ಉಪ ನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ್ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೋಧ್ರಾದಲ್ಲಿ ಹಿಂದೂಗಳನ್ನು ಸುಟ್ಟವರು ಮುಸ್ಲಿಮರು ಎಂದು ಕೆಂಡಾಮಂಡಲರಾಗಿದ್ದಾರೆ.

ರಾಜ್ಯ ಗೋಧ್ರಾದಂಗೆ ಅಂದ್ರೆ ಏನು? ಜವಾಬ್ದಾರಿ ಇಲ್ಲವಾ ನಿಮಗೆ? ಗೋಧ್ರಾ ಹೆದರಿಕೆ ಹಾಕ್ತಿರಾ ನಮಗೆ? ಹೆದರಿಕೆ ಹಾಕಿ ನೋಡುವಾ? ಹಿಂದೂಗಳನ್ನು ಸುಡ್ತಿರಾ ನೀವು?ಅದನ್ನು ಹೇಳುತ್ತೀರಾ ಕಾಂಗ್ರೆಸ್ ನವರು? ಎಂದು ಆಕ್ರೋಶ ಹೊರಹಾಕಿದ್ದಾರೆ.

ಹಿಂದೂಗಳನ್ನು ಸುಟ್ಟವರು ಮುಸ್ಲಿಂರು ಅಲ್ವಾ?

ರಾಜ್ಯ ಸರ್ಕಾರದ ಜವಾಬ್ದಾರಿ ಹಿಂದೂಗಳ ರಕ್ಷಣೆ ಮಾಡುವುದು. ಬಿ.ಕೆ. ಹರಿಪ್ರಸಾದ್ ಹೀಗೆ ಹೇಳುತ್ತಾರೆ ಎಂದ್ರೆ ಸರ್ಕಾರ ಏನು ಮಾಡುತ್ತಿದೆ? ಸಿಎಂ ಸಿದ್ದರಾಮಯ್ಯ ಏನು ಮಾಡುತ್ತಿದ್ದಾರೆ? ಗೋಧ್ರಾದಲ್ಲಿ ಹಿಂದೂಗಳನ್ನು ಸುಟ್ಟವರು ಮುಸ್ಲಿಂರು ಅಲ್ವಾ? ಕರ್ನಾಟಕದಲ್ಲಿಯೂ ಹಿಂದೂಗಳನ್ನೂ ಹಾಗೆ ಹೆದರಿಸುತ್ತಿದ್ದೀರಾ? ಎಂದು ಹರಿಹಾಯ್ದಿದ್ದಾರೆ.

Exit mobile version