Site icon PowerTV

ಈ ಡ್ರೆಸ್ ಧರಿಸಿ ಬಂದ್ರೆ ಮಾತ್ರ ಪುರಿ ಜಗನ್ನಾಥ ದರ್ಶನಕ್ಕೆ ಅವಕಾಶ

ಬೆಂಗಳೂರು : ಒಡಿಶಾದಲ್ಲಿರುವ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದಲ್ಲಿ ನಿನ್ನೆಯಿಂದ ವಸ್ತ್ರ ಸಂಹಿತೆ ಜಾರಿಯಾಗಿದ್ದು, ಹಲವು ರೀತಿಯ ಬಟ್ಟೆಗಳಿಗೆ ನಿರ್ಬಂಧ ಹೇರಲಾಗಿದೆ.

ಹಾಫ್​ ಪ್ಯಾಂಟ್​, ಶಾರ್ಟ್ಸ್​, ರಿಪ್ಡ್​ ಜೀನ್ಸ್​, ಸ್ಕರ್ಟ್​ ಮತ್ತು ಸ್ಲೀವ್​ಲೆಸ್​ ಡ್ರೆಸ್​ಗಳನ್ನು ಧರಿಸಿದವರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಭಕ್ತರು ದೇವಾಲಯಕ್ಕೆ ಪ್ರವೇಶಿಸಲು ಸಭ್ಯ ಉಡುಪುಗಳನ್ನು ಧರಿಸಬೇಕು ಎಂದು ತಿಳಿಸಲಾಗಿದೆ. ಶ್ರೀ ಜಗನ್ನಾಥ ದೇವಾಲಯದ ಆಡಳಿತವು ಹೆಚ್ಚಿನ ಭಕ್ತರು ಅಲ್ಲಿಂದ ದೇವಾಲಯಕ್ಕೆ ಬರುವುದರಿಂದ ಜನರಿಗೆ ಡ್ರೆಸ್ ಕೋಡ್ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version