Site icon PowerTV

ತೀರ್ಥಹಳ್ಳಿ ನ್ಯಾಷನಲ್ ಸಂಸ್ಥೆ ಮೇಲೆ ED ರೇಡ್​​!

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಉದ್ಯಮಿ ಸುಲೈಮಾನ್ ರ ನ್ಯಾಷನಲ್ ಸಂಸ್ಥೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ನ್ಯಾಷನಲ್ ಸಂಸ್ಥೆಯ ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್, ಇಂಡಿಯನ್ ಗ್ಯಾಸ್ ಗೋಡೌನ್ ಹಾಗೂ ಸುಲೈಮಾನ್ ಅವರ ಮನೆ ಮೇಲೂ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಹಾಗೂ ರಾಜ್ಯದ ಹಲವೆಡೆ ರಸ್ತೆಯ ಕಾಮಗಾರಿಗಳನ್ನು ಈ ಸಂಸ್ಥೆಯೇ ನಡೆಸುತ್ತಿದೆ.

ಇದನ್ನೂ ಓದಿ: ಹೆಚ್ಚಿದ ಚಿರತೆ ಹಾವಳಿ: ವಾಹನ ಸವಾರರ ಮೊಬೈಲ್​ ನಲ್ಲಿ ಸೆರೆಯಾಯ್ತು ದೃಶ್ಯ!

ಆದರೆ ಸಂಸ್ಥೆಯ ಹಣದ ವಿಚಾರದಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗ ಏರ್​​ಪೋರ್ಟ್​​ ಸೇರಿದಂತೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧೆಡೆ ಸಾವಿರಾರು ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಮಾಡಿದ್ದಾರೆ. ಅದರಲ್ಲೂ ಹೈವೇ ಮತ್ತು ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯನ್ನೂ ಈ ಕಂಪನಿಯೇ ನಡೆಸುತ್ತಿದೆ ಎನ್ನಲಾಗಿದೆ.

Exit mobile version