Site icon PowerTV

ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಗುಡಿಸಲಿಗೆ ಬೆಂಕಿ ಇಟ್ಟ ಸವರ್ಣೀಯರು!

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಹಣಕಾಸು ವಿಚಾರಕ್ಕೆ ದಲಿತ ಯುವಕ ಹನುಮಂತ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ.

ಸವರ್ಣಿಯರು ಯುವಕ ಮತ್ತು ಆತನ ಅತ್ತಿಗೆ ಮೇಲೆ ಹಲ್ಲೆ ನಡೆಸಿ ಅಣ್ಣನ ಗುಡಿಸಿಲಿಗೆ ಬೆಂಕಿ ಹಾಕಿದ್ದಾರೆ. ಗ್ರಾಮದ 10 ಮಂದಿ ಸವರ್ಣೀಯರು ಬೆಂಕಿ ಹಾಕಿದ್ದಾರೆ. ಡಿಸೆಂಬರ್ 31ರಂದು ರೈತ ಹನುಮಂತ ಮತ್ತು ಸಂತೋಷ ಮಧ್ಯೆ ಗಲಾಟೆ ನಡೆದಿದೆ.

ಸಂತೋಷ್​ ಹನುಮಂತನಿಂದ 50 ಸಾವಿರ ರೂ. ಸಾಲ ಪಡೆದಿದ್ದ. ಸಾಲ ವಾಪಸ್​​ ಕೇಳಿದ್ದಕ್ಕೆ ಹನುಮಂತ ಹಾಗೂ ಅತ್ತಿಗೆ ಸುಧಾ ಮೇಲೆ ಗುಂಪು ಹಲ್ಲೆ ನಡೆಸಿದೆ. ಕಿಡಿಗೇಡಿಗಳು ಹನುಮಂತನ ಸಹೋದರ ರೆಡ್ಡೆಪ್ಪನ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ. ಗಾಯಾಳು ಹನುಮಂತ ಹಾಗೂ ಅತ್ತಿಗೆ ಸುಧಮ್ಮರನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ತೀರ್ಥಹಳ್ಳಿ ನ್ಯಾಷನಲ್ ಸಂಸ್ಥೆ ಮೇಲೆ ED ರೇಡ್​​!

ಘಟನೆ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆಯ ಪ್ರಮುಖ ಆರೋಪಿಗಳಾದ ಶ್ರೀರಾಮೇಗೌಡ, ಸುರೇಶ್, ಸುನಿಲ್, ಶಿವಶಂಕರ್, ಜನಾರ್ಧನ್, ಲಲಿತಮ್ಮ, ಸಾಗರ್ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ.

Exit mobile version