ಬೆಂಗಳೂರು : ರಾಮಲಲ್ಲಾ ಕಲ್ಲಿನ ವಿಗ್ರಹ ಕೆತ್ತನೆಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ. ಸದ್ಯ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆಯ ಮೂರ್ತಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ. ರಾಮಲಲ್ಲಾ ವಿಗ್ರಹ ಆಯ್ಕೆ ಬಗ್ಗೆ ರಾಮಮಂದಿರ ಟ್ರಸ್ಟ್ ಮಾಹಿತಿ ನೀಡಿದೆ.
ಈ ಬಗ್ಗೆ ಶಿಲ್ಪಿ ಅರುಣ್ ಯೋಗಿರಾಜ್ ಹೆಂಡತಿ ವಿಜೇತ ಸಂತಸ ಹಂಚಿಕೊಂಡಿದ್ದಾರೆ. ನನಗೆ ತುಂಬಾ ಖುಷಿ ಆಗುತ್ತಿದೆ. ಅರುಣ್ ಅವರು 6 ತಿಂಗಳು ಮನೆಗೆ ಬಂದಿಲ್ಲ. ಮಗು ಇದ್ದರೂ 6 ತಿಂಗಳು ಮನೆಗೆ ಬಂದಿದೆ. ಇದರ ಬಗ್ಗೆ ಮಾತನಾಡುತ್ತಿದ್ದರು. ಅರುಣ್ ಅವರು ಕೆತ್ತಿರುವ ವಿಗ್ರಹ ಆಯ್ಕೆ ಆಗುತ್ತೆ ಎಂಬ ನಿರೀಕ್ಷೆ ಇತ್ತು ಎಂದು ಹೇಳಿದ್ದಾರೆ.
ಸರ್ಕಾರಿ ಕೆಲಸಕ್ಕೆ ಸೇರು ಅಂತ ಹೇಳ್ತಿದ್ದೆ
ಅರುಣ್ ತಾಯಿ ಸರಸ್ವತಿ ಮಾತನಾಡಿದ್ದು, ನನ್ನ ಮಗ ದೇಶವೇ ಹೆಮ್ಮೆ ಪಡುವ ಕೆಲಸ ಮಾಡಿದ್ದಾನೆ. ಮಗನನ್ನ ಸರ್ಕಾರಿ ಕೆಲಸಕ್ಕೆ ಸೇರು ಅಂತ ಹೇಳ್ತಾ ಇದ್ದೆ. ಸರ್ಕಾರಿ ಕೆಲಸ ಕೇಳ್ತಿಯಲ್ಲ, ಈಗ ಏನ್ ಹೇಳ್ತೀಯ ಅಮ್ಮ ಅಂತಾನೆ. ಪುತ್ರನ ಸಾಧನೆ ಕೊಂಡಾಡಲು ನಮ್ಮ ಯಜಮಾನರು ಇರಬೇಕಿತ್ತು ಎಂದು ಸರಸ್ವತಿ ಭಾವುಕರಾಗಿದ್ದಾರೆ.


