ನ್ಯೂ ಇಯರ್​ ಪಾರ್ಟಿಗೆ 193 ಕೋಟಿ ಮೌಲ್ಯದ ಎಣ್ಣೆ ಸೇಲ್

ಬೆಂಗಳೂರು: ಹೊಸ ವರ್ಷದ ಆಗಮನದ ಜೊತೆ ಮದ್ಯಯ ಕಿಕ್​ ಕೂಡ ಜೋರಾಗಿಯೇ ಇದೆ. ಸರ್ಕಾರದ ಬೊಕ್ಕಸಕ್ಕೆ ಎಣ್ಣೆ ಕಾಸು ಕೋಟಿ ಕೋಟಿ ಹರಿದು ಬಂದಿದೆ. 

2023ರ ಕೊನೆಯ ದಿನವಾದ ಭಾನುವಾರದಿಂದು 193 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಈ ಮೂಲಕ ಒಂದೇ ದಿನ ಭರ್ಜರಿ ಲಿಕ್ಕರ್ ಸೇಲ್ ಆಗಿದೆ. ಡಿಸೆಂಬರ್ ತಿಂಗಳಲ್ಲಿ ಇಂಡಿಯನ್ ಮೇಡ್ ಲಿಕ್ಕರ್ 3,07,953 ಬಾಕ್ಸ್‌, ಬಿಯರ್ 1,95,005 ಬಾಕ್ಸ್ ಮಾರಾಟವಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 2,611 ಕೋಟಿ ಆದಾಯ ಬಂದಿತ್ತು. ಈ ವರ್ಷ ಡಿಸೆಂಬರ್ ತಿಂಗಳಲ್ಲಿ 3 ಸಾವಿರ ಕೋಟಿ ಆದಾಯ ಸಂಗ್ರಹವಾಗಿದೆ.

ಇದನ್ನೂ ಓದಿ: ವಿಶಿಷ್ಟ ಡೂಡಲ್ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ ಗೂಗಲ್ !

ಒಟ್ಟಿನಲ್ಲಿ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದುಬಂದಿದೆ. ನಗರ ಹಾಗೂ ಗ್ರಾಮೀಣ ಭಾಗದ ಮೂಲೆ ಮೂಲೆಯಲ್ಲಿಯೂ ಜನರು ಮದ್ಯದ ನಶೆಯ ಮೂಲಕ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES