Site icon PowerTV

ಅನೈತಿಕ ಸಂಬಂಧ ಪ್ರಶ್ನಿಸಿದ ಗಂಡನನ್ನೇ ಕೊಂದ ಪತ್ನಿ : ಹೆಂಡ್ತಿ ಜೊತೆ ಪ್ರಿಯಕರ ಅರೆಸ್ಟ್

ಬೀದರ್ : ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಸಂಚು ರೂಪಿಸಿ ‌ಕೊಲೆ ಮಾಡಿದ್ದ ಆರೋಪಿಗಳು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ನವೆಂಬರ್‌ 11ರಂದು ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಬಳಿ ಅಮಿತ್‌ ಕೊಲೆಯಾಗಿತ್ತು. ಈ ಪ್ರಕರಣವನ್ನು ಕೊನೆಗೂ ಬೀದರ್ ಪೊಲೀಸರು ಬೇಧಿಸಿದ್ದಾರೆ.

ಅಮಿತ್‌ ಮೃತ ವ್ಯಕ್ತಿ. ಈತನ ಪತ್ನಿ ಚೈತ್ರಾ, ಆಕೆಯ ಪ್ರಿಯಕರ ರವಿ ಪಾಟೀಲ್ ಹಾಗೂ ಕೊಲೆಗೆ ಸಾಥ್ ನೀಡಿದ್ದ ಸಿಕ್ಕಿಂದರ್ ಶಾಹಾ, ವೆಂಕಟ್ ಗಿರಿಮಾತೆ ಮತ್ತು ಆಕಾಶ್ ಅವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕೃತ್ಯಕ್ಕೆ ಬಳಸಿದ ರಾಡ್, ಮೊಬೈಲ್‌ ಹಾಗೂ ಕೊಲೆ ಮಾಡಲು ನೀಡಿದ್ದ ದುಡ್ಡನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣ ಬೇಧಿಸಿದ್ದು ಹೇಗೆ?

ನವೆಂಬರ್‌ 11ರಂದು ಅಮಿತ್‌ ಶವ ಪತ್ತೆಯಾಗಿತ್ತು. ಇದನ್ನು ಅಪಘಾತ ಎಂಬಂತೆ ಬಿಂಬಿಸಲಾಗಿತ್ತು. ಆದರೆ, ಮೃತದೇಹ ನೋಡಿದಾಗ ಪೊಲೀಸರಿಗೆ ಅನುಮಾನ ವ್ಯಕ್ತವಾಗಿತ್ತು. ತನಿಖೆ ಮುಂದುವರಿಸಿದ ಪೊಲೀಸರು ಮೃತದೇಹ ಸಿಕ್ಕ ಸ್ಥಳದಲ್ಲಿ ಸಕ್ರಿಯವಾಗಿದ್ದ ಮೊಬೈಲ್‌ ನಂಬರ್‌ ಪತ್ತೆ ಹಚ್ಚಿದ್ದಾರೆ. ಬಳಿಕ ಸಿಕ್ಕಿಂದರ್, ವೆಂಕಟ್ ಮತ್ತು ಆಕಾಶ್​ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ, ಚೈತ್ರಾ ಪ್ರಿಯಕರ ರವಿ ಪಾಟೀಲ್ ಹಣ ನೀಡಿ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

Exit mobile version