Site icon PowerTV

ಯಾರೋ ನನ್ನ ಮೇಲೆ ಮಾಟ ಮಾಡಿಸಿರಬೇಕು: ವಿ. ಸೋಮಣ್ಣ

ಬೆಂಗಳೂರು: ನಾನು ನಿಂತ ನೀರಲ್ಲ ಹರಿಯುವ ನೀರು ಯಾರೋ ನನಗೆ ಮಾಟ ಮಾಡಿಸಿದ್ರೇನೋ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ ಎಂದು ಬಿಜೆಪಿ ಮಾಜಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. 

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಅನ್ಯಾಯ ಆಗಿದೆ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ. ಗೋವಿಂದರಾಜನಗರ ಕ್ಷೇತ್ರ ಬಿಡಬಾರದಿತ್ತು. ಆಗ ಯಾರಾದ್ರು ನನಗೆ ಮಾಟ ಮಂತ್ರ ಮಾಡಿಸಿದ್ದರೇನೋ, ಕ್ಷೇತ್ರ ಬಿಟ್ಟೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಜನವರಿ 9ಕ್ಕೆ ದೆಹಲಿಯಲ್ಲಿ ವರಿಷ್ಠರ ಭೇಟಿ ಆಗುತ್ತೇನೆ, ನನಗೆ ಆದ ಅನ್ಯಾಯವನ್ನ ವರಿಷ್ಠರ ಬಳಿ ಹೇಳುತ್ತೇನೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯ : ಹೊಟ್ಟೆ ನೋವಿನಿಂದ ಬಾಣಂತಿ ಸಾವು

ನನಗೆ ನೇರವಾಗಿ ತೊಂದರೆ ಆಗಿದೆ. ಯಾರು ಕಾರಣವೋ ಅವರನ್ನ ಕೂರಿಸಿ ಮಾತುಕತೆ ನಡೆಸಲಿ. ಇದನ್ನ ಸರಿಪಡಿಸಿ ಎಂದು ಹೈಕಮಾಂಡ್ ನಾಯಕರ ಬಳಿ ಕೇಳಿದ್ದೇನೆ. ಯಾರಿಂದ ತೊಂದರೆ ಆಗಿದೆಯೋ ಅವರನ್ನ ಕರೆಸಿ ಸೂಚನೆ ಕೊಡಿಸಬೇಕು. ಬಹುಶಃ ಜನವರಿ 10ರ ಒಳಗೆ ಎಲ್ಲವೂ ಬಗೆಹರಿಯಲಿದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಸ್ಪರ್ಧೆ; ವರಿಷ್ಠರ ಮಾತಿಗೆ ಬದ್ಧ

ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ವಿ. ಸೋಮಣ್ಣ, ರಾಷ್ಟ್ರೀಯ ವರಿಷ್ಠರ ಮಾತಿಗೆ‌ ಬದ್ಧನಾಗಿರುತ್ತೇನೆ. ನಮ್ಮ ಮೇಲೆ ಗದಾಪ್ರಹಾರ ಆಗದಂತೆ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ಆಗಬೇಕು ಎಂದು ಹೇಳಿದರು.

Exit mobile version