ದಕ್ಷಿಣ ಆಫ್ರಿಕಾ: ರೋಹಿತ್ ಶರ್ಮಾ ಹಾಗೂ ಅವರ ಪತ್ನಿ ರಿತಿಕಾ ತಮ್ಮ ಮಗಳು ಸಮೈರಾ ಶರ್ಮಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಹಿಟ್‌ಮ್ಯಾನ್ ಅಲ್ಲೇ ಮಗಳ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಮೈರಾ ಅವರೊಂದಿಗೆ ಹುಟ್ಟುಹಬ್ಬದ ಕೇಕ್ ಕತ್ತರಿಸಿದರು. ವಿಶೇಷ ಎಂದರೆ ರೋಹಿತ್ ತನ್ನ ಮುದ್ದು ಮಗಳ ಹುಟ್ಟಿದ ದಿನದಂದು ಚಿಕ್ಕ ಮಗುವಿನಂತೆ ಆಟವಾಡಿ ಸಂಭ್ರಮಿಸಿದ್ದಾರೆ. ಸಮೀರ ಜೊತೆಗೆ ಟಾಯ್ ಟ್ರೈನ್ ನಲ್ಲಿ ಸವಾರಿ ಮಾಡಿದ ರೋಹಿತ್ ಮಗಳ ಜೊತೆಗೆ ಕಣಿದು ಕುಪ್ಪಳಿಸಿದ್ದಾರೆ.
ಇದನ್ನೂ ಓದಿ: ತುಂಡುಡುಗೆ ಧರಿಸಿದ್ದಕ್ಕೆ ಪತಿಯಿಂದ ಪತ್ನಿಯ ಕತ್ತುಸೀಳಿ ಮರ್ಡರ್!
ಹುಟ್ಟುಹಬ್ಬದ ಪಾರ್ಟಿಯ ವಿಡಿಯೋವನ್ನು ರಿತಿಕಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ರೋಹಿತ್ ಮಗಳ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಸಮೀರಾಗೆ ಅಭಿಮಾನಿಗಳು ಮತ್ತು ನೆಟಿಜನ್‌ಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.