Site icon PowerTV

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ‘ಕಾಟೇರ’ : ಎರಡನೇ ದಿನ 17.35 ಕೋಟಿ ಕಮಾಯ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಅಪ್ಪಟ ಕನ್ನಡ ಸೊಗಡಿನ ಚಿತ್ರ ‘ಕಾಟೇರ’ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ.

ಕೇವಲ ಕನ್ನಡದಲ್ಲಿ ಮಾತ್ರ ತೆರೆಕಂಡ ಕಾಟೇರ ಚಿತ್ರ ಎರಡನೇ ದಿನ ಕರ್ನಾಟಕದ ಬಾಕ್ಸ್​ ಆಫೀಸ್​ನಲ್ಲಿ ಬರೋಬ್ಬರಿ 17.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ ಮತ್ತು ಎರಡನೇ ದಿನ ಸೇರಿ ಒಟ್ಟು ಎರಡು ದಿನಕ್ಕೆ 37.14 ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ.

ಕಾಟೇರ ಸಿನಿಮಾ ರಿಲೀಸ್ ಆಗಿ ಒಂದೇ ದಿನಕ್ಕೆ ಕೋಟಿ ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಕಾಟೇರ ಚಿತ್ರದ ಮೊದಲ ದಿನದ ಗಳಿಕೆ ಬರೋಬ್ಬರಿ 19.79 ಕೋಟಿ ರೂಪಾಯಿ. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಮತ್ತು ಡಿ ಬಾಸ್ ಸೆಲೆಬ್ರಿಟಿಸ್ ಸಂಭ್ರಮಿಸುತ್ತಿದ್ದಾರೆ.

ಅಪ್ಪಟ ಕನ್ನಡ ಸೊಗಡಿನ ಉತ್ತಮ ಕಥೆ ಹೊಂದಿರುವ ಕಾಟೇರ ಚಿತ್ರವನ್ನು ಕನ್ನಡ ಪ್ರೇಕ್ಷಕರು ಅಪ್ಪಿ ಒಪ್ಪಿಕೊಂಡಿದ್ದಾರೆ. ಕಾಟೇರದಲ್ಲಿ ನಟ ದರ್ಶನ್ ಎರಡು ಪಾತ್ರಗಳಲ್ಲಿ ನಟಿಸಿ ಫುಲ್ ಮಾರ್ಕ್ಸ್​ ಗಿಟ್ಟಿಸಿಕೊಂಡಿದ್ದಾರೆ. ಮಾಲಾಶ್ರೀ ಅವರ ಪುತ್ರಿ ಆರಾಧನಾ ಮೊದಲ ಸಿನಿಮಾದಲ್ಲೇ ದೊಡ್ಡ ಯಶಸ್ಸು ಕಂಡಿದ್ದಾರೆ. ರಾಕ್​ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ತರುಣ್ ಕಿಶೋರ್ ಸುಧೀರ್ ಡಿ ಬಾಸ್​ಗೆ ಆಕ್ಷನ್​ ಕಟ್ ಹೇಳಿದ್ದಾರೆ.

Exit mobile version