Site icon PowerTV

ಆಹ್ವಾನವಿಲ್ಲದ ಮದುವೆ ಕಾರ್ಯಕ್ರಮಗಳಿಗೆ ಹೋದರೆ ಜೈಲೂಟ ಗ್ಯಾರಂಟಿ!

ಬೆಂಗಳೂರು: ಆಹ್ವಾನವಿಲ್ಲದ ಮದುವೆ, ಪಾರ್ಟಿ ಇತ್ಯಾದಿ ಖಾಸಗಿ ಕಾರ್ಯಕ್ರಮಗಳಿಗೆ ಹೋಗುವುದು ಶಿಕ್ಷಾರ್ಹ ಅಪರಾಧ ಎಂದು ಸಿವಿಲ್ ನ್ಯಾಯಾಧೀಶೆ ಬಿ.ವಿ ಸ್ವಾತಿ ತಿಳಿಸಿದ್ದಾರೆ.

ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಈ ರೀತಿ ಆಹ್ವಾನವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು ಅಪರಾಧ ಎಂದು ತಿಳಿದು ಬಂದಿದೆ. ಈ ಕುರಿತ ಕುತೂಹಲಕಾರಿ ಮಾಹಿತಿಯನ್ನು ಸಿವಿಲ್ ನ್ಯಾಯಾಧೀಶೆ ಬಿ.ವಿ ಸ್ವಾತಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ, ಆಹ್ವಾನವಿಲ್ಲದಿರುವ ಮದುವೆ, ಪಾರ್ಟಿ ಇತ್ಯಾದಿ ಖಾಸಗಿ ಕಾರ್ಯಕ್ರಮಗಳಿಗೆ ಹೋಗೋದು ಖಂಡಿತವಾಗಿಯೂ ಒಂದು ಅಪರಾಧ. ಇದನ್ನು ʼಗೇಟ್ ಕ್ರ್ಯಾಶ್ʼ ಅಂತ  ಕರೆಯುತ್ತಾರೆ. ಹೀಗೆ ಆಹ್ವಾನವಿಲ್ಲದ  ಕಾರ್ಯಕ್ರಮಗಳಿಗೆ ಹೋಗಿ ಊಟ ಮಾಡಿ ಬರುವ  ದೃಶ್ಯಗಗಳನ್ನು ಸಿನೆಮಾಗಳಲ್ಲಿ ನೋಡಿರಬಹುದು.  ನಿಜ ಜೀವನದಲ್ಲೂ ಈ ರೀತಿಯ ಹುಚ್ಚು ಸಾಹಸಕ್ಕೆ ಏನಾದ್ರೂ ಕೈ ಹಾಕಿದ್ರೆ, ಇದು ಖಂಡಿತವಾಗಿಯೂ ಅಪರಾಧವಾಗುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಆಫ್ರಿಕಾದಲ್ಲಿ ಮಗಳ ಹುಟ್ಟುಹಬ್ಬವನ್ನು ಭರ್ಜರಿ ಆಗಿ ಆಚರಿಸಿದ ರೋಹಿತ್ ಶರ್ಮಾ

ಹೀಗೆ ನೀವೇನಾದ್ರೂ ಆಹ್ವಾನವಿಲ್ಲದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಕ್ಕಿಬಿದ್ರೆ, ನಿಮ್ಮನ್ನು  ಸೆಕ್ಷನ್ 442  ಮತ್ತು ಸೆಕ್ಷನ್ 452 ಇಂಡಿಯನ್ ಪಿನಲ್ ಕೋಡ್ ಪ್ರಕಾರ ಪೋಲಿಸರು ನಿಮ್ಮನ್ನು ಅರೆಸ್ಟ್ ಕೂಡಾ ಮಾಡಬಹುದು. ಅಲ್ಲದೆ  ಈ ಒಂದು ತಪ್ಪಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದು ಎಂದು ವಿವರಿಸಿದ್ದಾರೆ. ಡಿಸೆಂಬರ್​ 15ರಂದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡಲಾಗಿದ್ದು, ಇಲ್ಲಿಯವರೆಗೂ 1 ಮಿಲಿಯನ್​ಗಿಂತಲೂ ಅಧಿಕ ವೀಕ್ಷಣೆಗೆ ಒಳಪಟ್ಟಿದೆ.

Exit mobile version