Site icon PowerTV

‘ಕಾಟೇರ’ ಪದಗಳನ್ನು ಮೀರಿದ ‘ವಿಜಯೋತ್ಸವ’ : ನಟ ರಿಷಬ್ ಶೆಟ್ಟಿ ಬಣ್ಣನೆ

ಬೆಂಗಳೂರು : ನಟ ದರ್ಶನ್ ಅಭಿನಯದ ಕಾಟೇರ್ ಚಿತ್ರ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ವೀಕ್ಷಿಸಿರುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ‘ಡಿ ಬಾಸ್’ ಅಭಿನಯಕ್ಕೆ ಫಿದಾ ಆಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಕಾಟೇರ’ ಚಿತ್ರ ಪದಗಳನ್ನು ಮೀರಿದ ವಿಜಯೋತ್ಸವ. ದರ್ಶನ್ ಸರ್, ತರುಣ್ ಸುಧೀರ್ ಹಾಗೂ ರಾಕ್​ಲೈನ್ ಸರ್ (ರಾಕ್​ಲೈನ್ ಎಂಟರ್‌ಟೈನ್‌ಮೆಂಟ್) ಮೂವರು ರಾಕ್ ಎಂದು ಬಣ್ಣಿಸಿದ್ದಾರೆ.

ಕಾಟೇರ ಟ್ರೈಲರ್ ಬಿಡುಗಡೆಯಾದಾಗಲೂ ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಟೇರ ಟ್ರೈಲರ್ ಸದ್ದು ಜೋರಾಗಿದೆ. ದರ್ಶನ್ ಸರ್ ಹೊಸ ಮಾಸ್ ಲುಕ್ ಅಭಿಮಾನಿಗಳಿಗೆ ಹಬ್ಬ ಆಗಲಿದೆ. ನಿರ್ದೇಶಕ ತರುಣ್ ಸುಧೀರ್, ರಾಕ್​ಲೈನ್ ವೆಂಕಟೇಶ್ ಸರ್ ಗೆ ಅಭಿನಂದನೆಗಳು. ಕಾಟೇರ ಚಿತ್ರಕ್ಕೆ ಅತ್ಯುತ್ತಮ ಅಭೂತಪೂರ್ವ ಯಶಸ್ಸು ಸಿಗಲೆಂದು ಆಶಿಸುತ್ತೇನೆ ಎಂದು ಶುಭ ಹಾರೈಸಿದ್ದಾರೆ.

ನಿಮಗೆ ನೀವೇ ಸಾಟಿ ಡಿ ‘ಬಾಸ್’

ಕಾಟೇರ ಚಿತ್ರವನ್ನು ನೋಡಿ ನಟಿ ಶ್ರುತಿ ದರ್ಶನ್ ನಟನೆಗೆ ಪಿಧಾ ಆಗಿದ್ದಾರೆ. ನಿಮಗೆ ನೀವೇ ಸಾಟಿ ದರ್ಶನ್. ನಿಮ್ಮ ನಟನೆ ಕಂಡು  ಮೂಕವಿಸ್ಮಿತಳಾದೆ. ಮನಸ್ಸಿಗೆ ಮುದ ನೀಡುವ ಕಾಟೇರ ಚಿತ್ರವನ್ನು ಈಗಷ್ಟೇ ನೋಡಿದೆ. ಚಿತ್ರದ ಪ್ರತಿ ಬಿಟ್ ಇಷ್ಟವಾಯಿತು. ತರುಣ್ ಸುಧೀರ್ ಮತ್ತು ತಂಡಕ್ಕೆ ಹ್ಯಾಟ್ಸ್ ಆಫ್. ಪ್ರತಿಯೊಬ್ಬ ಅಭಿಮಾನಿಯೂ ಈ ಚಿತ್ರವನ್ನು ಮೆಚ್ಚುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.

ದಿ ಬೆಸ್ಟ್ ಕಮರ್ಷಿಯಲ್ ಸಿನಿಮಾ

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನಸೋರೆ ಕಾಟೇರ ಚಿತ್ರ ಕಣ್ತುಂಬಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಜಡೇಶ್, ಮಾಸ್ತಿ ಹಾಗೂ ತರುಣ್ ಸುಧೀರ್ ಅವರು ಕಾಟೇರ ಸಿನಿಮಾದ ಯಶಸ್ಸಿಗೆ ಮೂವರು ಸೂತ್ರಧಾರರು. ಇತ್ತೀಚಿನ ಸಿನಿಮಾಗಳಲ್ಲೇ ದರ್ಶನ್ ಸರ್ ಅವರ ದಿ ಬೆಸ್ಟ್ ಕಮರ್ಷಿಯಲ್ ಸಿನಿಮಾ ‘ಕಾಟೇರ’ ಎಂದು ಟ್ವೀಟ್ ಮಾಡಿದ್ದಾರೆ.

Exit mobile version