Site icon PowerTV

ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟಿದೆ : ಮುರುಗೇಶ್ ನಿರಾಣಿ

ವಿಜಯಪುರ : ‘ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟಿದೆ. ಆ ಮರಿ ಹುಲಿ ಇದೀಗ ದೊಡ್ಡದಾಗಿದೆ’ ಎಂದು ಯಡಿಯೂರಪ್ಪರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಕೊಂಡಾಡಿದ್ದಾರೆ.

ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.

ಯಡಿಯೂರಪ್ಪ ಸೈಕಲ್ ಮೇಲೆ ಅಡ್ಡಾಡಿ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡಗುತ್ತೆ ಅನ್ನೋ ಮಾತಿತ್ತು. ಇದೀಗ ವಿಜಯೇಂದ್ರ ಗುಡುಗಿದ್ರೆ ವಿಜಯಪುರ ಜಿಲ್ಲೆ ಸೇರಿ 31 ಜಿಲ್ಲೆಗಳೂ ನಡಗುತ್ತವೆ ಎಂದು ಬಣ್ಣಿಸಿದ್ದಾರೆ.

ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲುವುದಿಲ್ಲ

ಇದೇ ವೇಳೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಅವರಿಗೆ ಮುರುಗೇಶ್ ನಿರಾಣಿ ಟಕ್ಕರ್ ಕೊಟ್ಟಿದ್ದಾರೆ. ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲುವುದಿಲ್ಲ. ಪಕ್ಷದ ಹಿರಿಯ ನಾಯಕರು ಯಾರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ ಎಂದು ಕುಟುಕಿದ್ದಾರೆ.

ನಿರಾಣಿ.. ವಿಜಯಪುರಕ್ಕೆ ಸೇರಿದವ

‘ಮುರುಗೇಶ್ ನಿರಾಣಿ ಕೇವಲ ಬಾಗಲಕೋಟೆ ಜಿಲ್ಲೆಗಷ್ಟೇ ಸೀಮಿತ ಅಲ್ಲ, ಅಖಂಡ ವಿಜಯಪುರ ಜಿಲ್ಲೆಗೆ ಸೇರಿದವ ಈ ನಿರಾಣಿ. ನಿಮ್ಮ ಕೆಲಸಗಳು ಏನೇ ಇದ್ದರು ನನ್ನ ಬಳಿ ಬನ್ನಿ. ನನ್ನದೇ ಕ್ಷೇತ್ರ ಎನ್ನುವಂತೆ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ, ಕೆಲಸ ಮಾಡಿಕೊಡುತ್ತೇನೆ’ ಎನ್ನುವ ಮೂಲಕ ಯತ್ನಾಳ್​ಗೆ ಟಾಂಗ್ ಕೊಟ್ಟಿದ್ದಾರೆ.

Exit mobile version