Site icon PowerTV

ಒಬ್ಬಳು ಯುವತಿ ಸೇರಿ ಏಳು ಮಂದಿ ಮೇಲೆ ಹುಚ್ಚುನಾಯಿ ದಾಳಿ!

ಬೆಂಗಳೂರು: ಹುಚ್ಚುನಾಯಿಯೊಂದು ಏಳು ಜನರಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಯಲಹಂಕದ ಕೆಂಪೇಗೌಡ ಸರ್ಕಲ್​ ಬಳಿ ನಡೆದಿದೆ.

ಯಲಹಂಕದಲ್ಲಿ ಶುಕ್ರವಾರ ಸಂಜೆ ಸುಮಾರು 4.30 ರಿಂದ 6 ಗಂಟೆ ಸರಿಯಾಗಿ ಹುಚ್ಚುನಾಯಿ ಯಲಹಂಕದ ಮೂವರು ಯುವಕರು ಹಾಗು ಮಣಿಪುರದ ಓರ್ವ ಯುವಕನಿಗೆ ಕಚ್ಚಿದೆ. ಇದಲ್ಲದೇ, ಇಲ್ಲಿನ ಇಬ್ಬರು ಬಾಲಕ ಹಾಗು ಒಬ್ಬ ಬಾಲಕಿಯನ್ನು ಕೆಂಪೇಗೌಡ ಸರ್ಕಲ್​ ನಿಂದ ಕೊಂಡಪ್ಪ ಲೇಔಟ್​ ವರೆಗೂ ಹಿಂಬಾಲಿಸಿಕೊಂಡು ಬಂದು ಕಚ್ಚಿದೆ.

ಇದನ್ನೂ ಓದಿ: ಬೀಚ್​​ಗೆ ತೆರಳಿದ್ದ ಇಬ್ಬರು ಸಮುದ್ರ ಪಾಲು!

ಗಾಯಾಳುಗಳನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.  ಹುಚ್ಚುನಾಯಿ ದಾಳಿಯಿಂದ ಭಯಭೀತರಾಗಿರುವ ಯಲಹಂಕ ಮತ್ತು ಕೊಂಡಪ್ಪ ಲೇಔಟ್ ಜನ ಭಯ ಭೀತರಾಗಿದ್ಧಾರೆ. ಬಿಬಿಎಂಪಿ ಸಿಬ್ಬಂದಿ ಹುಚ್ಚು ನಾಯಿಯನ್ನು ಹಿಡಿದು ಯಾವುದೇ ಅನಾಹುತಗಳು ಸಂಭವಿಸದಂತೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version