Site icon PowerTV

ನಾಳೆ ಮಾರ್ಗಶಿರ ಮಾಸದ ಸಂಕಷ್ಟಹರ ಚತುರ್ಥಿ: ಪೂಜಾ ವಿಧಿ – ವಿಧಾನ ಹೀಗಿದೆ..!

ಬೆಂಗಳೂರು: ನಾಳೆ ಮಾರ್ಗಶಿರ ಮಾಸದ ಸಂಕಷ್ಟಹರ ಚತುರ್ಥಿ. ಸಂಕಷ್ಟ ನಿರ್ವಾರಕ ಮಾರ್ಗಶಿರ ಮಾಸದಲ್ಲಿ ಏಕೆ ಆಚರಣೆ ಮಾಡುತ್ತಾರೆ.ಪೂಜಾ ವಿಧಿ-ವಿಧಾನಗಳೇನು ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ

ಹೌದು, ಗಣೇಶನಿಗೆ ಪೂಜೆಗಳಲ್ಲಿ ಅಗ್ರಸ್ಥಾನ. ಗಣೇಶನನ್ನು ಬುದ್ಧಿವಂತಿಕೆ ಮತ್ತು ಅದೃಷ್ಟದ ದೇವರು ಎಂದು ಪೂಜಿಸಲಾಗುತ್ತದೆ. ಸಂಕಷ್ಟಿ ಎಂದರೆ ಕಷ್ಟಗಳಿಂದ ಮುಕ್ತಿ.ಇಂತಹ ಕಷ್ಟಗಳಿಂದ ನಿವಾರಣೆ ಪಡೆಯುವದಕ್ಕೆ ಪ್ರತಿ ತಿಂಗಳು ಸಂಕಷ್ಟ ಚತುರ್ಥಿ ಆಚರಣೆ ಮಾಡಲಾಗುವುದು. ಈ ವ್ರತ ಅನುಸರಿಸುವುದರಿಂದ ಗಣೇಶನು ಭಕ್ತರ ಸಮಸ್ಯೆಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ.

ಸಕಲ ಶಾಪ ಪರಿಹಾರಕ ಅಖುರಥ ಮಹಾಗಣಪತಿ ಪೂಜಾ ವಿಧಾನ 

ನಾಳೆ ಗಣೇಶನ ಪೂಜೆಯನ್ನು 30-12-2023 ರ ಸಂಜೆ 05:28 ರಿಂದ ರಾತ್ರಿ 07:58 ರೊಳಗೆ ಪೂಜೆಯನ್ನು ಮಾಡಬೇಕು, ದುರ್ಗಾಪೀಠದಲ್ಲಿ ಸ್ಥಾಪಿಸಬೇಕು. ನೈವೇದ್ಯಕ್ಕೆ ಕಡುಬು, ಆಂಬೋಡೆ, ಪಂಚಕಜ್ಜಾಯ, ಮೋದಕವನ್ನು ಮಾಡಿ ಅರ್ಪಿಸಬೇಕು. ನಾಳೆ “ಓಂ ಆಖುರಥ ಮಹಾಗಣಪತಯೇ ನಮಃ” ಎಂದು 1008 ಬಾರಿ ಜಪಿಸಬೇಕು.

50 ಶನಿವಾರದಂದು ಸಂಕಷ್ಟಹರ ಚತುರ್ಥಿ ಬಂದಿರುವುದರಿಂದ ಜನ್ಮಶನಿ, ಅಷ್ಟಮ ಶನಿ, ಸಾಡೇಸಾತ್ ಶನಿದೇವರ ತೊಂದರೆ, ರಾಹು ದೆಶೆ ಮತ್ತು ಜಾತಕದಲ್ಲಿ ಮಂಗಳ-ಕೇತು ಸಂಯೋಗ ಇರುವವರಿಗೆ ಈ ಆಖುರಥ ಮಹಾಗಣಪತಿಯ ಆರಾಧನೆಯನ್ನು ಮಾಡುವುದರಿಂದ ದೋಷಗಳು ಪರಿಹಾರವಾಗುತ್ತದೆ.

 ಈ ಮಂಡಲವನ್ನು ಹಾಕಿ ಆಖುರಥ ಮಹಾಗಣಪತಿಯನ್ನು ಆರಾಧಿಸಿ

ಮಾರ್ಗಶಿರ ಮಾಸದ ಸಂಕಷ್ಟಹರ ಚತುರ್ಥಿಯ ಫಲಾಫಲಗಳು

 

Exit mobile version