Site icon PowerTV

ಕುರುಬ ಸಮುದಾಯಕ್ಕೆ ST ಮೀಸಲಾತಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ!

ಯಾದಗಿರಿ: ಕುರುಬ ಸಮುದಾಯಕ್ಕೆ ST ಮೀಸಲಾತಿ ನೀಡುವಂತೆ ಆಗ್ರಹಿಸಿ ಯಾದಗಿರಿ ಜಿಲ್ಲೆಯ ಶಹಾಪುರದ‌ ಬಸವೇಶ್ವರ ಚೌಕ ಬಳಿ ಪ್ರತಿಭಟನೆ ನಡೆಸಲಾಗಿದೆ.

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಕಲಬುರಗಿ ವಿಭಾಗದ ಸಿದ್ದರಾಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಯಾದಗಿರಿ, ಕಲಬುರಗಿ, ಬೀದರ್​​ನಲ್ಲಿ ಕುರುಬರಿಗೆ ST ಮೀಸಲಾತಿ ನೀಡಿವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್​ಗೆ ನೆರವಿನ ಹಸ್ತ ಚಾಚಿದ ಅಮೆರಿಕ!

ಈಗಾಗಲೇ ಬೀದರ್​ನಲ್ಲಿನ ಕುರುಬ ಸಮುದಾಯಕ್ಕೆ ಗೊಂಡ ಹೆಸರಿನಲ್ಲಿ ಮೀಸಲಾತಿ ನೀಡಲಾಗ್ತಿದೆ. ಯಾದಗಿರಿ, ಕಲಬುರಗಿ ಹಾಗೂ ಬೀದರ್ ಕುರುಬ ಸಮುದಾಯಕ್ಕೆ ಮೀಸಲಾತಿ ಕೊಡುವಂತೆ ಆದೇಶ ಇದ್ದರೂ ಪ್ರಮಾಣ ಪತ್ರ ಕೊಡ್ತಿಲ್ಲ. ಆದರೇ, ಅಧಿಕಾರಿಗಳು ಪ್ರಮಾಣ ಪತ್ರ ನೀಡದೇ ಮೋಸ ಮಾಡ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.

Exit mobile version