Site icon PowerTV

ಬಸ್​ನಲ್ಲಿ ಸೀಟಿಗಾಗಿ ಮಹಿಳೆಯರ ಹೊಡೆದಾಟ : ‘ಶಕ್ತಿ’ ಯೋಜನೆ ‘ಶಕ್ತಿ’ ಪ್ರದರ್ಶನ

ಹುಬ್ಬಳ್ಳಿ : ಸೀಡ್​ಗಾಗಿ ರಾಜಕಾರಣದಲ್ಲಿ ಹೊಡೆದಾಟ, ಬಡೆದಾಟಗಳು ಕಾಮನ್. ಆದರೆ, ಶಕ್ತಿ ಯೋಜನೆ ಜಾರಿಯಾಗಿದ್ದೇ ತಡ ಬಸ್ ಸೀಟ್​ಗಾಗಿ ಮಹಿಳೆಯರ ಹೊಡೆದಾಟ ಕಾಮನ್ ಆಗಿದೆ.

ಇದಕ್ಕೆ ಸಾಕ್ಷಿ ಎಂಬುವಂತೇ ಹುಬ್ಬಳ್ಳಿಯಲ್ಲಿಯೂ ಕೂಡ ಮಹಿಳೆಯರು ಬಸ್​ನಲ್ಲಿ ಸೀಟಿಗಾಗಿ ಪರಸ್ಪರ ಹೊಡೆದಾಡಿದ ವಿಡಿಯೋ ವೈರಲ್ ಆಗಿದೆ.

ಹಳೇ ಬಸ್ ನಿಲ್ದಾಣದಿಂದ ಕಿಮ್ಸ್ ಹೋಗುವ ಬಸ್ಸಿನಲ್ಲಿ ಸೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯರು ಹೊಡೆದಾಡಿದ ಘಟನೆ ನಡೆದಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದು ವೈರಲ್ ಆಗಿವೆ.

ಇನ್ನೂ ಬಹುತೇಕ ಕಡೆಯಲ್ಲಿ ಮಹಿಳೆಯರು ಸೀಟ್ ವಿಷಯಕ್ಕೆ ಹೊಡೆದಾಡುತ್ತಿರುವುದು ನಿಜವಾದ ಶಕ್ತಿ ಯೋಜನೆಯ ಶಕ್ತಿ ಪ್ರದರ್ಶನ ಎಂಬುವಂತಾಗಿದೆ. ಇಂತಹದೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Exit mobile version