Site icon PowerTV

ನಾನು ರೆಡಿ ಆಗಲು 1 ಗಂಟೆ 10 ನಿಮಿಷ ಬೇಕು : ಹೇರ್ ಸ್ಟೈಲ್ ಬಗ್ಗೆ ಧೋನಿ ಕ್ಲಾರಿಟಿ

ಬೆಂಗಳೂರು : ಭಾರತ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತಾವು ಉದ್ದನೆಯ ಕೂದಲು (ಹೇರ್​ ಸ್ಟೈಲ್) ಕಾಪಾಡಿಕೊಳ್ಳುವ ಬಗ್ಗೆ ಇಂಟ್ರೆಸ್ಟಿಂಗ್ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಂ.ಎಸ್ ಧೋನಿ, ತಮ್ಮ ಇತ್ತೀಚಿನ ಹೇರ್​ ಸ್ಟೈಲ್ ​(ಕೇಶ ವಿನ್ಯಾಸ) ಅನ್ನು ಕಾಪಾಡಿಕೊಳ್ಳಲು ಕಷ್ಟವಾಗಿದ್ದರೂ, ಈ ನೋಟವನ್ನು ಅಭಿಮಾನಿಗಳಿಂದ ಪಡೆದ ಪ್ರೀತಿಯಿಂದಾಗಿ ಅದನ್ನು ಉಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಹೇರ್​ ಸ್ಟೈಲ್​ ಅನ್ನು ನಿರ್ವಹಿಸುವುದು ತುಂಬಾ ಕಷ್ಟ. ನಾನು ಈ ಮೊದಲು 20 ನಿಮಿಷಗಳಲ್ಲಿ ರೆಡಿ ಆಗುತ್ತಿದ್ದೆನು. ಆದರೆ, ಈಗ ರೆಡಿಯಾಗಲು 1 ಗಂಟೆ 10 ನಿಮಿಷಗಳು ತೆಗೆದುಕೊಳ್ಳುತ್ತೇನೆ. ಫ್ಯಾನ್ಸ್ ಉದ್ದನೆಯ ಕೂದಲನ್ನು ಇಷ್ಟಪಡುತ್ತಿರುವುದರಿಂದ ನಾನು ಅದನ್ನು ಮಾಡುತ್ತಿದ್ದೇನೆ. ಆದರೆ, ಒಂದು ದಿನ ನಾನು ಎಚ್ಚರಗೊಂಡು ಸಾಕು ಎಂದು ನಿರ್ಧರಿಸುತ್ತೇನೆ. ನಾನು ಅದನ್ನು ಟ್ರಿಮ್ ಮಾಡುತ್ತೇನೆ ಎಂದು ಉದ್ದನೆಯ ಕೂದಲಿಗೆ ಕತ್ತರಿ ಹಾಕುವ ಬಗ್ಗೆಯೂ ಸೂಚನೆ ನೀಡಿದ್ದಾರೆ.

Exit mobile version