Site icon PowerTV

ಮನೆ ಮುಂದೆ ನಿಲ್ಲಿಸಿದ ಆಟೋ ಸುಟ್ಟ ದುಷ್ಕರ್ಮಿಗಳು, ಸುಟ್ಟು ಭಸ್ಮವಾಯ್ತು ರಿಕ್ಷಾ

ಹುಬ್ಬಳ್ಳಿ : ಮನೆ ಮುಂದೆ ನಿಲ್ಲಿಸಿದ ಆಟೋವನ್ನು ದುಷ್ಕರ್ಮಿಗಳು ಮಧ್ಯರಾತ್ರಿ ಸುಟ್ಟು ಹೋದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ನೇಕಾರ ನಗರದ ಮಹಾಲಕ್ಷ್ಮೀ ಕಾಲೋನಿಯಲ್ಲಿ ವೀರಣಗೌಡ ಪಾಟೀಲ್ ಎಂಬುವವರಿಗೆ ಸೇರಿದ ಆಟೋ ಇದಾಗಿದೆ. ಹಗಲೆಲ್ಲೇ ದುಡಿದು ರಾತ್ರಿ ವೇಳೆ ಯಥಾಸ್ಥಿತಿ ಮನೆ ಮುಂದೆ ನಿಲ್ಲಿಸಿದ್ದರು. ಮಧ್ಯರಾತ್ರಿ 1.30ಕ್ಕೆ ಯಾರೋ ದುಷ್ಕರ್ಮಿಗಳು ಆಟೋವನ್ನೆ ಸುಟ್ಟು ಹೋಗಿದ್ದಾರೆ.

ಆಟೋಗೆ ಬೆಂಕಿ ಹತ್ತಿದ್ದನ್ನು ನೋಡಿದ ಅಕ್ಕ ಪಕ್ಕದವರು ಮಾಲೀಕನನ್ನು ಎಬ್ಬಿಸಿ ಬೆಂಕಿ ನಿಂದಿಸಿದ್ದಾರೆ. ಅಷ್ಟರಲ್ಲಿ ಆಟೋ ಸುಟ್ಟು ಕರಕಲಾಗಿದೆ. ಈಗ ಆ ಕುಟುಂಬ ಕಣ್ಣೀರು ಹಾಕುತ್ತಿದೆ. ಸ್ಥಳಕ್ಕೆ ಹಳೇ ಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಟೋ ಮಾಲೀಕರು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version