Site icon PowerTV

Kaatera First Review Out : ಡಿ ಬಾಸ್ ಫ್ಯಾನ್ಸ್​ಗೆ ‘ಕಾಟೇರ’ ಪಕ್ಕಾ ಮಾರಿಹಬ್ಬ : ಮಹೇಶ್ ಕುಮಾರ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರವನ್ನು ವೀಕ್ಷಿಸಿರುವ ಅಯೋಗ್ಯ ಸಿನಿಮಾ ನಿರ್ದೇಶಕ ಎಸ್. ಮಹೇಶ್ ಕುಮಾರ್ ಸಿನಿಮಾದ ಮೊದಲ ರಿವ್ಯೂವ್ ಬಹಿರಂಗಪಡಿಸಿದ್ದಾರೆ.

ಈ ಕುರಿತು ತಮ್ಮ ಇನ್ಸ್​ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಪ್ರೀತಿಯ ದರ್ಶನ್ ಸರ್ ಮತ್ತು ರಾಕ್​ಲೈನ್​ ವೆಂಕಟೇಶ್ ಹಾಗೂ ಚಿತ್ರತಂಡದ ಜೊತೆ ನಿನ್ನೆ ರಾತ್ರಿ ಸಿನಿಮಾ ನೋಡಿದೆ ಎಂದು ಚಿತ್ರತಂಡದೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ.

ಯಾರು ಏನು ಬೇಕಾದರೂ ತಿಳಿದುಕೊಳ್ಳಬಹುದು. ನನ್ನ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ. ಕಾಟೇರ ಅತ್ಯದ್ಭುತ ಚಿತ್ರ. ದರ್ಶನ್ ಸರ್ ಎರಡು ರೀತಿಯ ಪಾತ್ರಗಳಲ್ಲಿ ಪರಕಾಯ ಪ್ರವೇಶಿಸಿ ಅಭಿನಯಿಸಿದ್ದಾರೆ. ಅವರ ಅಭಿನಯಕ್ಕೆ ಅವರೇ ಸಾಟಿ. ಹ್ಯಾಟ್ಸ್​ ಆಫ್​ ಎಂದು ಕೊಂಡಾಡಿದ್ದಾರೆ.

ಚಿತ್ರದ ಕೊನೆಯ ದೃಶ್ಯ ಮುಗಿದಾಗ ನನ್ನ ಸಹಿತ ಎಲ್ಲರ ಕಣ್ಣಲ್ಲಿ ಮನದುಂಬಿ ನೀರು ತುಂಬಿಕೊಂಡಿತು. ಈಗಲೂ ನನಗೆ ಕಾಟೇರನ ಹಲವಾರು ದೃಶ್ಯಗಳು ಚಿತ್ರ ಮುಗಿದ ಮೇಲೆಕಾಡುತ್ತಿವೆ. ನಾನು ಒಬ್ಬ ನಿರ್ದೇಶಕನಾಗಿ ಹಾಗೂ ಡಿ ಬಾಸ್ ಸೆಲೆಬ್ರೆಟಿಯಾಗಿ ಈ ಸಿನಿಮಾ ನನಗೆ ಹಬ್ಬ. ಇನ್ನು ಡಿ ಬಾಸ್ ಅಭಿಮಾನಿಗಳಿಗೆ ‘ಕಾಟೇರ’ ಸಿನಿಮಾ ಪಕ್ಕಾ ಮಾರಿಹಬ್ಬ. ಜೈ ‘ಕಾಟೇರ’ ಎಂದು ಹಾಡಿ ಹೊಗಳಿದ್ದಾರೆ.

ಸುಧೀರ್ ದೊಡ್ಡದಾಗಿ ಗೆದ್ದಿದ್ದಾರೆ

ರಾಕ್​ಲೈನ್ ವೆಂಕಟೇಶ್ ಅವರು ಒಂದು ಅತ್ಯುತ್ತಮ ಕಂಟೆಂಟ್ ಹೊಂದಿರುವ ಚಿತ್ರಕ್ಕೆ ಬಂಡವಾಳ ಹಾಕಿ ಅದ್ದೂರಿಯಾಗಿ ತೆರೆಗೆ ತಂದು ಗೆದ್ದಿದ್ದಾರೆ. ರಾಕ್​ಲೈನ್​ ಪ್ರೊಡಕ್ಷನ್​ಗೆ ಈ ‘ಕಾಟೇರ’ ಚಿತ್ರ ಹೆಮ್ಮೆಯ ಚಿತ್ರವಾಗಲಿದೆ. ತರುಣ್ ಕಿಶೋರ್ ಸುಧೀರ್ ಅವರು ನಿರ್ದೇಶನದಲ್ಲಿ ಮತ್ತೊಮ್ಮೆ ಯಶಸ್ವಿಯಾಗಿ ದೊಡ್ಡದಾಗಿ ಗೆದ್ದಿದ್ದಾರೆ ಎಂದು ಪ್ರಶಂಸಿಸಿದ್ದಾರೆ.

ಬ್ಲಾಕ್ ಬಸ್ಟರ್ ನಮ್ಮ ‘ಕಾಟೇರ’ ಚಿತ್ರ

ಸುಧಾಕರ್ ಛಾಯಾಗ್ರಹಣ ಸೂಪರ್, ಮಾಸ್ತಿ ಅವರ ಸಂಭಾಷಣೆ ಸೂಪರ್, ಜಡೇಶ್ ಅವರ ಕಥೆ ಸೂಪರ್. ಮಾಲಾಶ್ರೀ ಅವರ ಪುತ್ರಿ ಆರಾಧನಾ ಅವರ ಅಭಿನಯ ನಿಜಕ್ಕೂ ಅತ್ಯದ್ಭುತ. ಸ್ಯಾಂಡಲ್​ವುಡ್​ನಲ್ಲಿ ಉತ್ತಮ ನಟಿಯಾಗಿ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಡಿ ಬಾಸ್, ರಾಕ್​ಲೈನ್, ತರುಣ್​ ಸೇರಿ ಇಡೀ ತಂಡದ ಪರಿಶ್ರಮ ಸಾರ್ಥಕವಾಗಿದೆ. ಇಂಡಸ್ಟ್ರಿಯಲ್ಲಿ ದೊಡ್ಡ ಹಿಟ್ ಬ್ಲಾಕ್ ಬಸ್ಟರ್ ನಮ್ಮ ಕಾಟೇರ ಚಿತ್ರ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಬರೆದಿಟ್ಕೊಳ್ಳಿ ಎಂದು ಬಣ್ಣಿಸಿದ್ದಾರೆ.

Exit mobile version